HEALTH TIPS

ಸುಬ್ಬಯ್ಯಕಟ್ಟೆಯಲ್ಲಿ ಸೌಹಾರ್ದ ಸಂಗಮ

ಕುಂಬಳೆ: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಅವರ ಸುಬ್ಬಯ್ಯಕಟ್ಟೆಯ ಸ್ವಗೃಹದಲ್ಲಿ ಭಾನುವಾರ ಸೌಹಾರ್ದ ಸಂಗಮ ಸಮಾರಂಭ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬೇಕಲ ಕಣ್ಣನ್ ಪಾಟಾಳಿ ಕಥಕಳಿ ಅಧ್ಯಯನ ಕೇಂದ್ರದ ನಿರ್ದೇಶಕ, ಪೋಲೀಸ್ ಅಧಿಕಾರಿ ವಿ.ಬಾಲಕೃಷ್ಣನ್, ಸ್ಥಳೀಯ ರೈತ ಹೋರಾಟಗಾರ ಸೀತಾರಾಮ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.  


ಸುಬ್ಬಯ್ಯಕಟ್ಟೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಪ್ರಬಂಧಕ ಬಿ.ಎ.ಖಾದರ್, ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್., ಬ್ಲಾ.ಪಂ.ಸದಸ್ಯ ಅಸೀಸ್ ಮರಿಕೆ, ವರ್ಕಾಡಿ ಚರ್ಚ್ ಧರ್ಮಗುರು ಫಾದರ್ ಬಾಸಿಲ್ ವಾಸ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಕರ್ನಾಟಕ ಜಾನಪದ ಪರಿಷತ್ತು ದ.ಕ.ಘಟಕ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲು, ಮಂಜುನಾಥ ಆಳ್ವ ಮಡ್ವ, ಉದಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಕಾರ್ಯದರ್ಶಿ ಗಂಘಾದರ ತೆಕ್ಕೇಮೂಲೆ,ಖಜಾಂಜಿ ಶ್ರೀಕಾಂತ್ ನಾರಾಯಣ್, ಪತ್ರಕರ್ತರಾದ ಪುರುಷೋತ್ತಮ ಬಿ.ಎಂ, ಅಚ್ಯುತ್ತ ಚೇವಾರ್, ವಿ.ಜಿ.ಕಾಸರಗೋಡು, ಅಜಿತ್ ಸ್ವರ್ಗ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಜಯ ಮಣಿಯಂಪಾರೆ, ಹರ್ಷ ರೈ ಪುತ್ರಕಳ, ಅಖಿಲೇಶ್ ನಗುಮುಗಂ, ವಕೀಲ ಥೋಮಸ್ ಡಿಸೋಜ, ಜಯನಾರಾಯಣ ತಾಯನ್ನೂರ್, ಚನಿಯಪ್ಪ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ರವಿ ನಾಯ್ಕಾಪು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ನಿರ್ವಹಿಸಿದರು. ಎ.ಆರ್.ಸುಬ್ಬಯ್ಯಕಟ್ಟೆ ಸಂಯೋಜಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries