HEALTH TIPS

"ಸಂಘರ್ಷ ನಮ್ಮ ಹಿತ್ತಲು ತಲುಪಿದೆ" : ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧ ನೌಕೆ ಮೇಲೆ ದಾಳಿ ಬಗ್ಗೆ ಪ್ರಧಾನಿ ಮೋದಿಯ ಮೌನ ಪ್ರಶ್ನಿಸಿದ ರಾಹುಲ್ ಗಾಂಧಿ

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಇರಾನ್ ನ ಯುದ್ಧ ನೌಕೆ ಐರಿಸ್ ದೇನಾವನ್ನು ಅಮೆರಿಕ ಮುಳುಗಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಜಗತ್ತು ಈಗ ಅಸ್ಥಿರ ಹಂತಕ್ಕೆ ತಲುಪಿದೆ.

ಮುಂದೆ ಸವಾಲುಗಳು ಕಾದಿವೆ. ಭಾರತದ ತೈಲ ಸರಬರಾಜು ಅಪಾಯದಲ್ಲಿದೆ. ನಮ್ಮ ಆಮದುಗಳ 40% ಕ್ಕಿಂತ ಹೆಚ್ಚು ಹಾರ್ಮುಝ್ ಮೂಲಕ ಸಾಗುತ್ತದೆ. ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ವಿಷಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಸಂಘರ್ಷವು ನಮ್ಮ ಹಿತ್ತಲನ್ನು ತಲುಪಿದೆ. ಇರಾನಿನ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿಸಿರುವ ಬಗ್ಗೆ ವರದಿಯಾಗಿದೆ. ಆದರೂ ಪ್ರಧಾನಮಂತ್ರಿ ಈ ಬಗ್ಗೆ ಮೌನವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ಸ್ಥಿರ ಹಾಗೂ ದಿಟ್ಟ ನಾಯಕತ್ವದ ಅಗತ್ಯವಿದೆ. ಆದರೆ, ನಾವು ಕಾರ್ಯತಂತ್ರದ ಸ್ವಾಯುತ್ತತೆಯನ್ನು ಬಿಟ್ಟುಕೊಟ್ಟ ರಾಜಿ ಮಾಡಿಕೊಂಡ ಪ್ರಧಾನಿಯನ್ನು ಹೊಂದಿದ್ದೇವೆ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries