ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ/ದಾನಿಗಳ ಸಹಕಾರದಿಂದ ರೂಪುಗೊಂಡ ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ ಸಮಾಜ ಸೇವಾ ಕಾರ್ಯ ಉದ್ದೇಶದ 14 ನೇ ಕುಲಾಲ ಆಸರೆ ಸಹಾಯಹಸ್ತವನ್ನು ಕುಲಾಲ ಸಂಘ ಕುಂಬ್ದಾಜೆ ಶಾಖೆಗೋಳಪಟ್ಟ ಪೊಡಿಪಳ್ಳ ನಿವಾಸಿ ದಿ.ಕೊರಗಪ್ಪ ಮೂಲ್ಯರ ಕುಟುಂಬಕ್ಕೆ ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಸಂಘಟನಾ ಸಂಚಾಲಕ ಸುಧೀರ್ ರಂಜನ್ ದೈಗೋಳಿ, ಕುಲಾಲ ಸಂಘ ಕುಂಬ್ದಾಜೆ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಮಾಸ್ತರ್ ಏತಡ್ಕ ಉಪಸ್ಥಿತರಿದ್ದರು.


