ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಶುಚಿತ್ವ ಕಲಿಕೋತ್ಸವದ ವತಿಯಿಂದ ಹಸಿರು ಸೇನೆ ವಿದ್ಯಾರ್ಥಿವೇತನ ವಿತರಣೆ ಶುಕ್ರವಾರ ಬದಿಯಡ್ಕ ಪಂಚಾಯತಿ ಸಭಾ ಭವನದಲ್ಲಿ ಜರಗಿತು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾ ಮುಂದುವರಿಯಬೇಕು. ನಾಡಿನ ಉತ್ತಮ ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳುವ ಶಿಕ್ಷಣ ಅವರಿಗೆ ಲಭಿಸಬೇಕು ಎಂದರು.
ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ., ಬ್ಲಾಕ್ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಗ್ರಾಮಪಂಚಾಯಿತಿ ಸದಸ್ಯರು ಶುಭಾಶಂಸನೆಗೈದರು. ಗ್ರಾಮಪಂಚಾಯಿತಿ ಕಾರ್ಯದರ್ಶಿ ಸರಿನ್ ಎ.ಕೆ. ಸ್ವಾಗತಿಸಿ, ಪಿಇಸಿ ಕಾರ್ಯದರ್ಶಿ ಮಂಜುನಾಥ ಬಿ. ವಂದಿಸಿದರು.

.jpg)
.jpg)
