ಪೆರ್ಲ : ತ್ಯಾಜ್ಯ ಮುಕ್ತ ಕೇರಳಕ್ಕಾಗಿ ತ್ಯಾಜ್ಯ ಮುಕ್ತ ಪರಿಸರಕ್ಕಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಶಾಲೆಗಳಿಂದಲೇ ತ್ಯಾಜ್ಯ ವಸ್ತುಗಳ ನಿರ್ಮೂಲನೆ, ಪುನರುಪಯೋಗ ಇವುಗಳ ಚಟುವಟಿಕೆಗಳ ಮೂಲಕ ಅವರಿಗೆ ತಿಳಿಸಲು ಹಸಿರು ಕ್ರಿಯಾಸೇನೆಯ ನೇತೃತ್ವದಲ್ಲಿ ಶುಚಿತ್ವ ಪಠನೋತ್ಸವ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಂತೆ ಎಣ್ಮಕಜೆ ಗ್ರಾಮ ಪಂ.ನ 13 ಶಾಲೆಗಳಲ್ಲಿ ಯುಪಿ, ಎಚ್‍ಎಸ್ ಮತ್ತು ಎಚ್‍ಎಸ್‍ಎಸ್ ವಿಭಾಗಗಳಿಂದ ತಲಾ 2 ಮಕ್ಕಳನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಿ ಸ್ಕಾಲರ್ ಶೀಫ್ ವಿತರಿಸುವ ಕಾರ್ಯಕ್ರಮ ಪಂ.ಸಭಾಂಗಣದಲ್ಲಿ ನಡೆಯಿತು. ಪಂ.ಅಧ್ಯಕ್ಷೆ ಬಿ.ಕುಸುಮಾವತಿ ಸ್ಕಾಲರ್ ಶಿಪ್ ವಿತರಿಸಿದರು. ಪಂ.ಉಪಾಧ್ಯಕ್ಷ ಅಬುಬ್ಬಕ್ಕರ್ ಸಿದ್ಧೀಕ್ ವಳಮೊಗರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್. ಮುಖ್ಯ ಅತಿಥಿಗಳಾಗಿದ್ದರು.ಪಂ. ಸಹಾಯಕ ಕಾರ್ಯದರ್ಶಿ ಗಿರೀಶ್, ಹೆಲ್ತ್ ಇನ್ಸ್ ಪೆಕ್ಟರ್ ಬಾಬುರಾಜ್, ಪಂ.ಸ್ಥಾಯಿ ಸಮಿತಿ ಅಧ್ಯಕ್ಷರು, ಪಂ.ಸದಸ್ಯರು,ಹಸಿರು ಕ್ರಿಯಾಸೇನೆ ಉದ್ಯೋಗಿಗಳು ಉಪಸ್ಥಿತರಿದ್ದರು.


