ಕುಂಬಳೆ: ನಾರಾಯಣಮಂಗಲ ಶ್ರೀ ಚೀರುಂಬಾಭಗವತೀ ಕ್ಷೇತ್ರ ಸನಿಹದ ನಿವಾಸಿ ಎಸ್. ಪದ್ಮನಾಭ ಚೆಟ್ಟಿಯಾರ್(77)ಶನಿವಾರ ಸ್ವಗೃಹದಲ್ಲಿ ನಿಧನರಾದರು. ಅವರು ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಸಮಿತಿ ಹಿರಿಯ ಸದಸ್ಯರಾಗಿದ್ದರು. ಜಿಲ್ಲಾ ವೀವರ್ಸ್ ಕೋಓಪರೇಟಿವ್ ಸೊಸೈಟಿ ಮಾಜಿನಿರ್ದೇಶಕರಾಗಿದ್ದರು. ಅವರು ಪತ್ನಿ, ಪುತ್ರಿ, ಮೂವರು ಪುತ್ರರನ್ನು ಅಗಲಿದ್ದಾರೆ.


