HEALTH TIPS

ತೈಲ ಆಮದು ದ್ವಿಗುಣ| ಸಮುದ್ರದ ಮಧ್ಯೆ ಯೂ-ಟರ್ನ್ ಮಾಡಿ ಭಾರತದತ್ತ ಆಗಮಿಸುತ್ತಿರುವ ರಶ್ಯಾದ ತೈಲ ಟ್ಯಾಂಕರ್

ನವದೆಹಲಿ: ಭಾರತವು ರಶ್ಯಾದಿಂದ ಆಮದುಗಳನ್ನು ದ್ವಿಗುಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾಕ್ಕೆ ತೆರಳುತ್ತಿದ್ದ ರಶ್ಯಾದ ತೈಲ ಟ್ಯಾಂಕರ್ 'ಅಕ್ವಾ ಟೈಟನ್' ದಕ್ಷಿಣ ಚೀನಾ ಸಮುದ್ರದಲ್ಲಿ ಯೂ-ಟರ್ನ್ ಮಾಡಿದ್ದು,ಈಗ ಭಾರತದತ್ತ ಧಾವಿಸುತ್ತಿದೆ.

ಶಿಪ್-ಟ್ರ್ಯಾಕಿಂಗ್ ಡೇಟಾ ಪ್ರಕಾರ ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರ ಬಂದರಿನಿಂದ ಯೂರಲ್ಸ್ (ರಶ್ಯಾದ ಪ್ರದೇಶ) ತೈಲವನ್ನು ತುಂಬಿಕೊಂಡಿದ್ದ ಅಕ್ವಾ ಟೈಟನ್ ಮಾ.21ರಂದು ನವಮಂಗಳೂರು ಬಂದರಿಗೆ ಆಗಮಿಸಲಿದೆ.

ಈ ಮಧ್ಯಮ ಗಾತ್ರದ ತೈಲ ಟ್ಯಾಂಕರ್ ಮಾರ್ಚ್ ಮಧ್ಯದಲ್ಲಿ ದಿಕ್ಕನ್ನು ಬದಲಿಸುವ ಮುನ್ನ ಚೀನಾದ ರಿಝಾಹೊ ಬಂದರನ್ನು ತನ್ನ ಗಮ್ಯತಾಣವನ್ನಾಗಿಸಿಕೊಂಡಿತ್ತು. ಇದಕ್ಕೆ ಕೆಲವೇ ದಿನಗಳ ಹಿಂದೆ ಅಮೆರಿಕವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಭಾರತಕ್ಕೆ ಅನುಮತಿ ನೀಡಿತ್ತು.

ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದಿಂದ ಪೂರೈಕೆಯಲ್ಲಾದ ನಷ್ಟವನ್ನು ಸರಿದೂಗಿಸುವ ಪ್ರಯತ್ನದಲ್ಲಿ ದೇಶಕ್ಕೆ ನೆರವಾಗಲು ಭಾರತೀಯ ಸಂಸ್ಕರಣಾಗಾರಗಳು ಅಮೆರಿಕದ ಅನುಮತಿ ನಂತರದ ವಾರದಲ್ಲಿ ರಶ್ಯಾದಿಂದ 30 ಮಿಲಿಯನ್ ಬ್ಯಾರೆಲ್‌ಗಳಷ್ಟು ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸಿವೆ.

ವೊರ್ಟೆಕ್ಸಾ ಲಿ.ಪ್ರಕಾರ ರಶ್ಯಾದ ತೈಲವನ್ನು ಹೊತ್ತಿರುವ ಕನಿಷ್ಠ ಏಳು ಟ್ಯಾಂಕರ್‌ಗಳು ಯಾನದ ನಡುವೆಯೇ ತಮ್ಮ ಗಮ್ಯಸ್ಥಾನಗಳನ್ನು ಚೀನಾದಿಂದ ಭಾರತಕ್ಕೆ ಬದಲಿಸಿವೆ. ಭಾರತದ ಪ್ರಮುಖ ಸಂಸ್ಕರಣಾಗಾರಗಳು ಈಗ ರಶ್ಯಾದ ಕಚ್ಚಾ ತೈಲ ಮಾರುಕಟ್ಟೆಗೆ ಮುಗಿಬಿದ್ದಿವೆ.

ಪ್ರತ್ಯೇಕವಾಗಿ ಸುಯೆಜ್‌ಮ್ಯಾಕ್ಸ್ ಝೌಝೌ ತೈಲ ಟ್ಯಾಂಕರ್ ಭಾರತದ ಸಿಕ್ಕಾವನ್ನು ತನ್ನ ಮುಂದಿನ ಗಮ್ಯಸ್ಥಾನವಾಗಿಸಿಕೊಂಡಿದ್ದು, ಮಾ.25ರ ವೇಳೆಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಟ್ಯಾಂಕರ್ ಕಝಕ್ ಸಿಪಿಸಿ ಬ್ಲೆಂಡ್ ಕಚ್ಚಾ ತೈಲವನ್ನು ಹೊತ್ತಿದೆ. ಅದು ರಶ್ಯಾದ ಕಪ್ಪು ಸಮುದ್ರದ ನೊವೊರೊಸ್ಸಿಯಸ್ಕ್‌ನಿಂದ ಚೀನಾದ ರಿಝಾಹೊ ಬಂದರಿಗೆ ಯಾನವನ್ನು ಆರಂಭಿಸಿತ್ತಾದರೂ, ಮಾರ್ಚ್ ಪೂರ್ವಾರ್ಧದಲ್ಲಿ ತನ್ನ ಮಾರ್ಗವನ್ನು ಬದಲಿಸಿ ಭಾರತಕ್ಕೆ ಬರುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries