ಕಾಸರಗೋಡು: ಇತಿಹಾಸ ಪ್ರಸಿದ್ದ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೂಲ ಸ್ಥಾನ ಕ್ಷೇತ್ರದ ಆರಾಟು ಕೊಳ ಸಮೀಪದಲ್ಲಿರುವ ನಾಗರಾಜ ಕಟ್ಟೆಯ ಸಮಿತಿ ರಚನಾ ಮಹಾಸಭೆ ಜರುಗಿತು. ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 2026-27ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ರಕ್ಷಧಿಕಾರಿಗಳಾಗಿ ರಾಮ್ ಪ್ರಸಾದ್, ಸರ್ವೋತ್ತಮ ಕಾಮತ್, ಗೌರವಾಧ್ಯಕ್ಷರಾಗಿ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷರಾಗಿ ಲಕ್ಷ್ಮೀಶ ಭಟ್, ಉಪಾಧ್ಯಕ್ಷರಾಗಿ ಕೆ. ಎನ್. ರಾಮ ಹೊಳ್ಳ , ಸುಜಯ್ ಕುಮಾರ್, ತುಕರಾಮ ಆಚಾರ್ಯ ಕೆರೆಮನೆ, ವೈ. ವಿ. ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಸಾಯಿನಾಥ್ ರಾವ್, ಕಾರ್ಯದರ್ಶಿಗಳಾಗಿ ಮೋಹನ್ ದಾಸ್, ವಸಂತ್ ಕೆರೆಮನೆ, ಭರತ್ ರಾಜ್, ಜಿತಿನ್ ರಾಜ್, ಮಹೇಶ್ ಭಟ್ ಹಾಗೂ 25 ಮಂದಿ ಸದಸ್ಯರನ್ನುಳಗೊಂಡ ಸಮಿತಿ ರಚಿಸಲಾಯಿತು. ತುಕಾರಾಮ ಆಚಾರ್ಯ ಕೆರೆಮನೆ ಸ್ವಾಗತಿಸಿದರು. ಕಾತಿಕ ರಾವ್ ವಂದಿಸಿದರು. ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವದ ಆರಾಟು ದಿನದಂದು ದೇವರ ಕಟ್ಟೆ ಸವಾರಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.


