HEALTH TIPS

ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ವಜಾಗೊಳಿಸುವಂತೆ ಕೋರಿರುವ ನಿರ್ಣಯ ನಿಯಮಗಳಿಗೆ ಅನುಗುಣವಾಗಿದೆ, ಚರ್ಚೆ ನಡೆಯಲೇಬೇಕು: ಕಾಂಗ್ರೆಸ್

ನವದೆಹಲಿ: ಸ್ಪೀಕರ್ ಓಂ ಬಿರ್ಲಾರ ಪದಚ್ಯುತಿಯನ್ನು ಕೋರಿ ಸಲ್ಲಿಸಲಾಗಿರುವ ನೋಟಿಸ್‌ನ್ನು ಲೋಕಸಭೆಯು ಮುಂದಿನ ವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈ ನಡುವೆ, ಕಾಂಗ್ರೆಸ್ ಪಕ್ಷವು ನಿರ್ಣಯವು ನಿಯಮಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿದ್ದು, ಪ್ರತಿಪಕ್ಷ ಸದಸ್ಯರು ಸ್ಪೀಕರ್ ಅವರ 'ಪಕ್ಷಪಾತದ ನಡವಳಿಕೆ'ಯ ನಿರ್ದಿಷ್ಟ ನಿದರ್ಶನಗಳನ್ನು ನೀಡಿದ್ದಾರೆ.

ಇದು ಚರ್ಚೆಯನ್ನು ಅಗತ್ಯವಾಗಿಸಿದೆ ಎಂದು ಹೇಳಿದೆ.

ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತವು ಮಾ.9ರಿಂದ ಆರಂಭಗೊಳ್ಳಲಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು, ಟಿಎಂಸಿಯನ್ನು ಹೊರತು ಪಡಿಸಿ ಇತರ ಎಲ್ಲ ಪ್ರತಿಪಕ್ಷಗಳ 118 ಸಂಸದರು ಸ್ಪೀಕರ್ ಪದಚ್ಯುತಿ ಕೋರಿರುವ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ನೋಡೋಣ, ಅದನ್ನು ಮಾ.9ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ಹೇಳಿದರು.

'ಇದು ಆರೋಗ್ಯಕರ, ಪ್ರಜಾಪ್ರಸತ್ತಾತ್ಮಕ ಪದ್ಧತಿಯಾಗಿದೆ. ನಾವು ನಿಯಮಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ನಿರ್ಣಯವೊಂದನ್ನು ಸಲ್ಲಿಸಿದ್ದೇವೆ. ಈ ಹಿಂದೆಯೂ ಸ್ಪೀಕರ್ ಪದಚ್ಯುತಿಗಾಗಿ ನಿರ್ಣಯ ಸಲ್ಲಿಸಿದ್ದ ನಿದರ್ಶನಗಳಿವೆ. ಉದಾಹರಣೆಗೆ 1954ರಲ್ಲಿ 489 ಸದಸ್ಯ ಬಲದ ಸಂದನದಲ್ಲಿ ಸಂಯೋಜಿತ ಪ್ರತಿಪಕ್ಷ ಬಲವು ಕೇವಲ 50ರಷ್ಟಿತ್ತು ಮತ್ತು ಕಾಂಗ್ರೆಸ್ 364 ಸಂಸದರನ್ನು ಹೊಂದಿತ್ತು. ಆಗ ಸ್ಪೀಕರ್ ಜಿ.ವಿ.ಮಾವಲಂಕರ್ ವಿರುದ್ಧ ಅವಿಶ್ವಾಸ ಸೂಚನೆಯನ್ನು ಸಲ್ಲಿಸಲಾಗಿತ್ತು' ಎಂದು ಹೇಳಿದ ರಮೇಶ್‌, 'ಇವೆಲ್ಲ ಸಂಸದೀಯ ಪ್ರಜಾಪ್ರಭುತ್ವದ ಸಾಧನಗಳಾಗಿವೆ. ಪ್ರತಿಪಕ್ಷಕ್ಕೆ ಎಲ್ಲ ಹಕ್ಕುಗಳೂ ಇವೆ. ನಾವು ಚರ್ಚಿಸುತ್ತೇವೆ, ಅದರ ಬಳಿಕ ಏನಾಗುತ್ತದೆ ಎಂದು ನೋಡೋಣ' ಎಂದರು.

'ಸ್ಪೀಕರ್ ಅವರ ಪಕ್ಷಪಾತದ ನಡವಳಿಕೆಯ ನಿದರ್ಶನಗಳನ್ನು ನಾವು ನೀಡಿದ್ದೆವು. ಪ್ರತಿಪಕ್ಷ ಸದಸ್ಯರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು. ನಾವು ನಿರ್ಣಯದಲ್ಲಿ ಸಂದರ್ಭಗಳನ್ನು ಉಲ್ಲೇಖಿಸಿದ್ದೇವೆ ಮತ್ತು ಚರ್ಚೆ ನಡೆಯಲೇಬೇಕು' ಎಂದು ರಮೇಶ್‌ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries