ಹೈದರಾಬಾದ್: ಆಂಧ್ರ ಪ್ರದೇಶದ ತಿರುಮಲದಲ್ಲಿ ನಿರ್ಮಾಣವಾಗಿರುವ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶನಿವಾರ ಉದ್ಘಾಟಿಸಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ದೇವಸ್ಥಾನವೊಂದರ ಬಳಿ ಇಂಥ ಪ್ರಯೋಗಾಲಯ ನಿರ್ಮಾಣವಾಗಿದೆ.
ತಿರುಮಲ ತಿರುಪತಿ ದೇವಸ್ಥಾನದ ಬಳಿ ಇರುವ ಈ ಪ್ರಯೋಗಾಲಯಕ್ಕೆ ₹25 ಕೋಟಿ ವೆಚ್ಚವಾಗಿದೆ.
ದೇಗುಲದಲ್ಲಿ ನೀಡಲಾಗುವ ಶ್ರೀವಾರಿ ಪ್ರಸಾದ ಮತ್ತು ಅನ್ನಪ್ರಸಾದಕ್ಕೆ ಬಳಸಲಾಗುವ ವಸ್ತುಗಳನ್ನೂ ಕೂಡ ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

