HEALTH TIPS

ಕನಸಿನಲ್ಲಿ ಕಿರುಕುಳ: ಐಎಎಫ್‌ ಸಿಬ್ಬಂದಿ ಖುಲಾಸೆ

ಕಾನ್ಪುರ: ನಾದಿನಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಪೋಕ್ಸೊ ಪ್ರಕರಣ ಎದುರಿಸುತ್ತಿದ್ದ ಭಾರತೀಯ ವಾಯುಪಡೆಯ (ಐಎಎಫ್‌) ಸಿಬ್ಬಂದಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯವು ‍ಖುಲಾಸೆಗೊಳಿಸಿದೆ. 

'ಬಾವ ತನಗೆ ಕಿರುಕುಳ ನೀಡಿದ್ದು ಕನಸಿನಲ್ಲಿ' ಎಂದು ದೂರುದಾರೆ ಹೇಳಿದ ಬಳಿಕ ನ್ಯಾಯಪೀಠ ಆರೋಪಿಯನ್ನು ದೋಷಮುಕ್ತ ಎಂದು ಘೋಷಿಸಿದೆ.‌

2019ರ ಮಾರ್ಚ್‌ 8ರಂದು ತನ್ನ ಅಕ್ಕನ ಮನೆಯಲ್ಲಿ ತಂಗಿದ್ದ ಸಂದರ್ಭದಲ್ಲಿ ಬಾವ ತನಗೆ ಕಿರುಕುಳ ನೀಡಿದ್ದರೆಂದು ಆರೋಪಿಸಿ 15 ವರ್ಷದ ಬಾಲಕಿ ದೂರು ನೀಡಿದ್ದರು. ದೂರನ್ನು ಆಧರಿಸಿ ಅನುರಾಗ್‌ ಶುಕ್ಲಾ ವಿರುದ್ಧ ಎಫ್‌ಐಆರ್‌ ದಾಖಲಿಸಿ, 19 ದಿನ ಜೈಲಿನಲ್ಲಿ ಇರಿಸಲಾಗಿತ್ತು.

ಆದರೆ, ವಿಚಾರಣೆ ಸಂದರ್ಭದಲ್ಲಿ 'ಘಟನೆ ನಡೆದ ದಿನ ತಾನು ಆಯಂಟಿಬಯೋಟಿಕ್ಸ್‌ ಔಷಧಿ ತೆಗದಕೊಂಡು, ಅರೆ ಪ್ರಜ್ಞಾವಸ್ಥೆಯಲ್ಲಿದ್ದೆ. ಈ ವೇಳೆ ಶುಕ್ಲಾ ತನ್ನನ್ನು ಎಳೆದಾಡಿ ಕಿರುಕುಳ ನೀಡಿದಂತೆ ಕನಸು ಬಿದ್ದಿತ್ತು. ಹೀಗಾಗಿ ಗಾಬರಿಗೊಂಡು ಕಿರುಚಾಡಿ, ತಪ್ಪು ತಿಳುವಳಿಕೆಯಿಂದ ದೂರು ನೀಡಿದ್ದೆ' ಎಂದು ದೂರುದಾರೆ ಹೇಳಿದ್ದಾರೆ.

ಈ ಹಿಂದೆ ತಾವು ಮಾಡಿದ್ದ ಆರೋಪಗಳನ್ನೂ ಹಿಂಪಡೆದಿದ್ದಾರೆ. ಹೀಗಾಗಿ ನ್ಯಾಯಾಲಯವು ಮಾರ್ಚ್ 7ರಂದು ಶುಕ್ಲಾ ಅವರನ್ನು ಖುಲಾಸೆಗೊಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries