HEALTH TIPS

ಕಾಪಿರೈಟ್ ಉಲ್ಲಂಘಿಸಿದ 3,142 ಚಾನೆಲ್ ನಿಷೇಧಿಸಲು ಟೆಲಿಗ್ರಾಮ್‌ಗೆ ಕೇಂದ್ರದ ಸೂಚನೆ

ನವದೆಹಲಿ: ಕಾಪಿರೈಟ್ ಕಾಯ್ದೆಯನ್ನು ಉಲ್ಲಂಘಿಸಿದ 3,142 ಚಾನೆಲ್‌ಗಳನ್ನು ಮೂರು ಗಂಟೆಗಳೊಳಗೆ ನಿಷೇಧಿಸುವಂತೆ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ ಟೆಲಿಗ್ರಾಮ್‌ಗೆ ಕೇಂದ್ರ ಸರ್ಕಾರವು ಬುಧವಾರ ಸೂಚಿಸಿದೆ. 

ಕಾಪಿರೈಟ್‌ ಹೊಂದಿದ ಮಾಹಿತಿಗಳು ಹಾಗೂ ಒಟಿಟಿಯಲ್ಲಿದ್ದ ಸಿನಿಮಾ, ವೆಬ್‌ ಸರಣಿ ಮತ್ತು ಕಾರ್ಯಕ್ರಮಗಳನ್ನು ಕಾನೂನುಬದ್ಧ ಅನುಮತಿಯಿಲ್ಲದೆ ಪ್ರಸಾರ ಹಾಗೂ ಹಂಚಿಕೆ ಮಾಡುತ್ತಿದ್ದ ಆರೋಪದ ಮೇಲೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ.

ಕಾನೂನುಬದ್ಧ ಅನುಮತಿಯಿಲ್ಲದೆ ಯಾವುದೇ ವಿಷಯಗಳನ್ನು ಹಂಚಿಕೊಳ್ಳುವುದು ಮತ್ತು ಪ್ರಸಾರ ಮಾಡುವುದು ಕಾಪಿರೈಟ್ ಕಾಯ್ದೆ - 1957 ಉಲ್ಲಂಘನೆಯಾಗಿದೆ. ಹಾಗಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಸಿ. ಸೆಂಥಿಲ್ ರಾಜನ್ ಹೇಳಿದ್ದಾರೆ.

ಸೂಚನೆ ಜಾರಿಯಾದ ಮೂರು ಗಂಟೆಯೊಳಗೆ ಈ ಚಾನೆಲ್‌ಗಳನ್ನು ತೆಗೆದುಹಾಕಬೇಕು ಹಾಗು ಅದರಲ್ಲಿದ್ದ ಮಾಹಿತಿಯನ್ನು ಅಳಿಸಿ ಹಾಕಬೇಕು ಎಂದು ಟೆಲಿಗ್ರಾಮ್‌ಗೆ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries