ಕಾಸರಗೋಡು: ನಗರದ ನುಳ್ಳಿಪ್ಪಾಡಿ ಅಮೈ ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ ಸಮಿತಿಯ ಅಂಗವಾಗಿ ಭಜನಾ ಮಂದಿರದ ರಜತ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರೀಕ್ಷೇತ್ರದ ಪ್ರಸಾದ ರೂಪದಲ್ಲಿ ಕೊಡಮಾಡಿದ 25ಸಾವಿರ ರೂ. ಧನಸಹಾಯದ ಮೊತ್ತವನ್ನು ಮಂದಿರ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಅಮೈ ಶ್ರೀಕೃಷ್ಣ ಭಜನಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಬಿ ಸಿ ಟಸ್ರ್ಟ್ ಯೋಜನಾಧಿಕಾರಿ ದಿನೇಶ್, ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಕಾಸರಗೋಡು ವಲಯ ಮೇಲ್ವಿಚಾರಕ ಗೋಪಾಲಕೃಷ್ಣ, ಸೇವಾ ಪ್ರತಿನಿಧಿ ಶೋಭಾ ಅವರು ರಜತ ಮಹೋತ್ಸವ ಅಧ್ಯಕ್ಷ ಕೆ. ಸದಾಶಿವ ಮಲ್ಯ ಅವರಿಗೆ ಹಸ್ತಾಂತರಿಸಿದರು.
ಸಂದರ್ಭ ರಜತ ಮಹೋತ್ಸವದ ಪ್ರದಾನ ಕಾರ್ಯದರ್ಶಿ ಗುಣಪಾಲ ಅಮೈ ನಗರಸಭಾ ಸದಸ ರಾಜೇಶ್ ಅಮೈ, ಮಂದಿರ ಸಮಿತಿ ಉಪಾಧ್ಯಕ್ಷೆ ಪುಷ್ಪಾ, ಕೋಶಾಧಿಕಾರಿ ಮನೋಹರ, ಸದಸ್ಯರಾದ ಪದ್ಮಾವತಿ, ಗಂಗಾವತಿ ಮೊದಲಾದವರು ಉಪಸ್ಥಿತರಿದ್ದರು.



