ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 7 ನೇ ಪ್ರತಿಷ್ಠಾ ವಾರ್ಷಿಕ ಉತ್ಸವ ದೇವಸ್ಥಾನದಲ್ಲಿ ಜರುಗಿತು. ಕ್ಷೇತ್ರ ತಂತ್ರಿವರ್ಯ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನಿರ್ದೇಶ ಪ್ರಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ರುಧ್ರಾಭಿಷೇಕ, ಕ್ಷೀರಾಭಿಷೇಕ, ಉಷಾಪೂಜೆ ಮಧ್ಯಾಹ್ನ ನವಕಾಭಿಷೇಕ ವಿಶೇಷ ಮಹಾಪೂಜೆ ನೆರವೇರಿತು.
ಸಂಜೆ ದೀಪಾರಾಧನೆ, ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಭಜನೆ ಹಾಗೂ ಕುಣಿತ ಭಜನೆ ನಂತರ ಮಹಾಪೂಜೆ, ಕ್ಷೇತ್ರದ ಮುಖ್ಯ ಅರ್ಚಕ ಶಿವಶಂಕರ ಅಡಿಗ ಅವರಿಂದ ಬಾಲಗೋಕುಲದ ಮಕ್ಕಳಿಗೆ ವಿಶೇಷ ಪ್ರಾರ್ಥನಾ ಪ್ರಸಾದ ವಿತರಣೆ ನಡೆಯಿತು.
ಈ ಸಂಧರ್ಭ ಬಾಲಗೋಕುಲದ ಅಧ್ಯಾಪಿಕೆಯಾದ ಶ್ರೀಲತಾ ಟೀಚರ್, ಪ್ರಮುಖರಾದ ಎಕ್ಸ್ ಟ್ರಸ್ಟೀ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಎಸ್.ವಿ.ಟಿ, ಶಂಕರ ನಾರಾಯಣ ಹೊಳ್ಳ, ರವಿ ಕೇಸರಿ, ವಸಂತ್ ಕೆರೆಮನೆ, ಸವಿತಾ, ಪ್ರೇಮಾ, ಶ್ರೀವಳ್ಳಿ ಹಾಗೂ ಊರ,ಪರವೂರ ಭಕ್ತಾದಿಗಳು ಪಾಳ್ಗೊಂಡಿದ್ದರು.



