ಬದಿಯಡ್ಕ: ಕುಂಬ್ಡಾಜೆ ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಭಾನುವಾರ ಬೆಳಗ್ಗೆ ಮಹಾಗಣಪತಿ ಹೋಮದೊಂದಿಗೆ ಪ್ರಾರಂಭವಾಯಿತು. ಬೆಳಗ್ಗೆ ಉಷಃಪೂಜೆ, ಉಗ್ರಾಣ ಮುಹೂರ್ತ, ಗಣಪತಿ ಪೂಜೆ ನಡೆಯಿತು. ಅಪರಾಹ್ನ ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ವಾದ್ಯಘೋಷಗಳೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ವಿಜೃಂಭಣೆಯಿಂದ ಜರಗಿತು. ಮಾತೆಯರು ಮುತ್ತುಕೊಡೆಗಳೊಂದಿಗೆ ಮೆರವಣಿಗೆಗೆ ಶೋಭೆಯನ್ನು ನೀಡಿದರು. ಭಗವದ್ಭಕ್ತರು, ಕಾರ್ಯಕರ್ತರು ಹಸಿರುವಾಣಿಯೊಂದಿಗೆ ಮೆರವಣಿಗೆಯಲ್ಲಿ ಜೊತೆಗೂಡಿದರು.

.jpg)
