HEALTH TIPS

ಚೀನಾದ ಆಮದು ವಸ್ತುಗಳನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ:ಅರವಿಂದ ಕ್ರೇಜಿವಾಲ್

ಮೊಹಲಿ: ಚೀನಾದಿಂದ ಆಮದಾಗುವ ಪ್ಲಾಸ್ಟಿಕ್ ಬಕೆಟ್ ಹಾಗೂ ದೇವರ ವಿಗ್ರಹಗಳನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ ಎಂದು ಎಎಪಿ ನಾಯಕ ಅರವಿಂದ ಕ್ರೇಜಿವಾಲ್ ಅವರು ಶುಕ್ರವಾರ ತಿಳಿಸಿದ್ದಾರೆ.

'ಪ್ರೋಗ್ರೆಸಿವ್ ಪಂಜಾಬ್ ಇನ್ವೆಸ್ಟರ್‌ ಸಮ್ಮಿಟ್‌ -2026' ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

ಚೀನಾ ವಸ್ತುಗಳ ಬದಲಿಗೆ ಪಂಜಾಬ್‌ನಲ್ಲಿ ಉತ್ಪಾದನೆಯಾಗುವ ಎಲ್ಲಾ ವಸ್ತುಗಳಿಗೂ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ದೇವರು ಈ ದೇಶದಲ್ಲಿ ಎಲ್ಲವನ್ನೂ ಸೃಷ್ಟಿಸಿದ್ದಾನೆ. ದೇವರು ಜಗತ್ತನ್ನು ಸೃಷ್ಟಿಸಿದಾಗ ಹುಟ್ಟಿದ ಅದ್ಭುತ ಜಾಗವೇ 'ಭರತವರ್ಷ'. ನಮ್ಮಲ್ಲಿ ನದಿ, ಸಾಗರ, ಪರ್ವತ, ಖನಿಜ ಹಾಗೂ ಎಲ್ಲಾ ಸಂಪನ್ಮೂಲಗಳು ಕೂಡ ಇಲ್ಲಿವೆ. ಹಾಗಿದ್ದರೂ ಚೀನಾದಿಂದ ಗೊಂಬೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ನಾವು ಚೀನಾದಿಂದ ಮೊಬೈಲ್ ಚಾರ್ಜರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಾವು ನಮ್ಮ ಲಕ್ಷ್ಮಿ ಹಾಗೂ ಗಣೇಶನ ವಿಗ್ರಹವನ್ನು ಕೂಡ ತಯಾರು ಮಾಡುತ್ತಿಲ್ಲ. ಅದನ್ನು ಕೂಡ ಆಮದು ಮಾಡಿಕೊಳ್ಳುತ್ತಿದ್ದೇವೆ. ನಿಮಗೆ ಉತ್ಪಾದನೆ ಮಾಡಲು ಏನೆಲ್ಲಾ ಬೇಕೋ ಅದನ್ನು ನಾವು ಒದಗಿಸುತ್ತೇವೆ. ನೀವು ಚೀನಾಗೆ ರಫ್ತು ಮಾಡುವಂತಾಗಬೇಕು ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries