ಲಂಡನ್: ಇಂಗ್ಲೆಂಡ್ ಚರ್ಚ್‍ನ ಮುಖ್ಯಸ್ಥರಾಗಿ(ಆರ್ಚ್‍ಬಿಷಪ್ ಆಫ್ ಕ್ಯಾಂಟರ್‍ಬರಿ) 63 ವರ್ಷದ ಸಾರಾ ಮುಲಾಲಿ ಬುಧವಾರ ಅಧಿಕೃತವಾಗಿ ನೇಮಕಗೊಂಡಿದ್ದಾರೆ.
ಇದರೊಂದಿಗೆ 1,400 ವರ್ಷಗಳಲ್ಲಿ ಇಂಗ್ಲೆಂಡ್ ಚರ್ಚ್ ಅನ್ನು ಮುನ್ನಡೆಸುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಾರಾ ಪಾತ್ರರಾಗಿದ್ದರೆ.
ಪದಗ್ರಹಣ ಸಮಾರಂಭದಲ್ಲಿ ರಾಜಕುಮಾರ ವಿಲಿಯಂ, ರಾಜಕುಮಾರಿ ಕ್ಯಾಥರಿನ್ ಮತ್ತು ಪ್ರಧಾನಿ ಕೀರ್ ಸ್ಟಾರ್ಮರ್ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

