HEALTH TIPS

ಪಾಕಿಸ್ತಾನಕ್ಕೆ ಹೋಗುತ್ತಿದ್ದ ಹಡಗನ್ನು ಹಾರ್ಮುಝ್ ನಲ್ಲಿ ತಡೆಹಿಡಿದ ಇರಾನ್;‌ ವರದಿ

ಟೆಹರಾನ್: ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಕಂಟೈನರ್ ಹಡಗನ್ನು ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ತಡೆಹಿಡಿದಿರುವುದಾಗಿ ವರದಿಯಾಗಿದೆ.

ಯುಎಇಯ ಶಾರ್ಜಾದಿಂದ ಕರಾಚಿಗೆ ಸಾಗುತ್ತಿದ್ದ ʼಸೆಲೆನ್' ಎಂಬ ಹಡಗನ್ನು ಸಾರಿಗೆ ಅನುಮತಿ ಇಲ್ಲದ ಕಾರಣ ಹಾರ್ಮುಝ ಜಲಸಂಧಿಯ ಪ್ರವೇಶ ಮಾರ್ಗದಲ್ಲಿ ತಡೆದು ನಿಲ್ಲಿಸಿ ಹಿಂದಕ್ಕೆ ಕಳುಹಿಸಲಾಗಿದೆ.

ಕಾನೂನು ಶಿಷ್ಟಾಚಾರವನ್ನು ಅನುಸರಿಸಲು ವಿಫಲವಾಗಿರುವುದು ಮತ್ತು ಜಲಸಂಧಿಯ ಮೂಲಕ ಹಾದು ಹೋಗಲು ಅನುಮತಿಯ ಕೊರತೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಜಲಮಾರ್ಗದ ಮೂಲಕ ಯಾವುದೇ ಹಡಗು ಹಾದುಹೋಗಲು ಇರಾನ್‍ನ ಕಡಲ ಪ್ರಾಧಿಕಾರದೊಂದಿಗೆ ಸಂಪೂರ್ಣ ಸಮನ್ವಯತೆ ಮತ್ತು ಇರಾನ್‍ನ ಉದಾತ್ತ ಜನರ ಬೆಂಬಲದ ಅಗತ್ಯವಿರುತ್ತದೆ ಎಂದು ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC)ನ ನೌಕಾದಳದ ಕಮಾಂಡರ್ ʼಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇರಾನ್‍ನಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್-ಅಮೆರಿಕ ನಡುವಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವುದಾಗಿ ಪಾಕಿಸ್ತಾನ ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries