HEALTH TIPS

ಯುವಸಮಾಜ ದಾರಿತಪ್ಪದಂತೆ ಪೋಷಕರು ಎಚ್ಚರವಹಿಸಬೇಕು- ಬದಿಯಡ್ಕ ಪಂಚಾಯತಿ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಎಡನೀರು ಶ್ರೀ

ಬದಿಯಡ್ಕ: ಧರ್ಮಜೀವನ ಪದ್ಧತಿಯನ್ನು ರೂಢಿಸಿಕೊಂಡು ನಾವು ಮುನ್ನಡೆಯಬೇಕು. ಪ್ರಸ್ತುತದ ಬದಲಾವಣೆಯ ಕಾಲಗತಿಯಲ್ಲಿ ಅಸ್ಥಿರತೆ ಸಹಜ, ಆದರೆ ಅದನ್ನು ಒಗ್ಗೂಡಿಸುವುದೆ ಸಮಾಜೋತ್ಸವದ ಉದ್ದೇಶ. ಯುವ ಸಮಾಜವು ಪಾಶ್ಚಾತ್ಯ ಸಂಸ್ಕøತಿ ಸಂಸ್ಕಾರಗಳಿಂದ ದಾರಿ ತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅನ್ಯ ಧರ್ಮಿಯರು ನಮ್ಮ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಆಕ್ರಮಣವನ್ನು ಮಾಡುತ್ತಿರುವುದು ಖಂಡನೀಯ. ನಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪೆÇೀಷಕರ ಜವಾಬ್ದಾರಿ ಅಗತ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.

ಭಾನುವಾರ ಬದಿಯಡ್ಕ ಶ್ರೀ ಭಾರತೀ ನಗರ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. 


ಭಾರತೀಯ ವಕೀಲರ ಪರಿಷತ್ ಕೇರಳ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಎ.ವಿ.ಕೇಶವನ್ ದಿಕ್ಕೂಚಿ ಭಾಷಣದಲ್ಲಿ ಹಿಂದುತ್ವ ಎಂದರೆ ಭಾರತಾಂಬೆಯ ಶಕ್ತಿ. ಯಾವುದೇ ರಾಜಕೀಯಪಕ್ಷದಲ್ಲಿ ನೀವಿದ್ದರೂ ನಮ್ಮೊಳಗೆ ಹಿಂದುತ್ವ ಎಂಬುದು ಇರಬೇಕು. ಭಾಷೆ ವೇಷಕ್ಕೆ ಅತೀತವಾದ ಭಾರತವು ಸನಾತನ ಸಂಸ್ಕಾರದ ಹಿಂದೂದೇಶವಾಗಿದೆ. ಭಾರತವನ್ನು ಕಾಯಲು ಸಂಘಪರಿವಾರದ ಕಾರ್ಯಕರ್ತರಿದ್ದಾರೆ ಎಂದರು. 

ಸುಳ್ಯ ಕೆ.ವಿ.ಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಯಶೋದ ರಾಮಚಂದ್ರ ಮಾತನಾಡಿ, ಹಿಂದುತ್ವ ಎಂಬುದು ನಮ್ಮ ಜೀವನಪದ್ಧತಿ, ಅದು ನಮ್ಮ ರಾಷ್ಟ್ರೀಯತೆ. ಸನಾತನ ಧರ್ಮವೇ ನಮ್ಮ ಗುರುತು. ರಷ್ಯದಲ್ಲಿರುವವರು ರಷ್ಯನ್ನರು, ಅಮೇರಿಕದಲ್ಲಿರುವವರು ಅಮೇರಿಕನ್ನರು, ಚೀನದಲ್ಲಿರುವವರು ಚೀನೀಯರು ಆದರೆ ನಮ್ಮ ಭಾರತೀಯರೆಲ್ಲರೂ ಹಿಂದುಗಳು. ತಾಯಂದಿರು ಕ್ರೋಟನ್ ಗಿಡಗಳಲ್ಲ ಕಲ್ಪವೃಕ್ಷ. ವ್ಯಕ್ತಿಯು ರಾಷ್ಟ್ರಧರ್ಮವನ್ನು ಬಿಟ್ಟು ಬೇರೆಯಾದರೆ ಅದು ರಾಷ್ಟ್ರದ್ರೋಹ ಎಂದರು. 

ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಪೆರುಮುಂಡ, ವ್ಯವಸ್ಥಾಪಕ ಜಯರಾಮ ಚೆಟ್ಟಿಯಾರ್ ಬದಿಯಡ್ಕ, ಮಾತೃಸಮಿತಿ ಅಧ್ಯಕ್ಷೆ ಜಯಂತಿ ಕುಂಟಿಕಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಬಿ.ಎನ್ ಸ್ವಾಗತಿಸಿ, ಉಪಾಧ್ಯಕ್ಷ ಗಣೇಶ ಬಿ ವಂದಿಸಿದರು. ತಸ್ಮೈ ಆಚಾರ್ಯ ಮೂಕಂಪಾರೆ ಸಂಘಗೀತೆ ಹಾಡಿದರು. ವಿಘ್ನೇಶ್ ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಸಂಜೆ ಮಾತೆಯರಿಂದ ತಿರುವಾದಿರ ನೃತ್ಯ, ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ಗುರುಪ್ರಸಾದ ರೈ ಕೆ. ಹಾಗೂ ನಾರಾಯಣ ವಿದ್ಯಾಗಿರಿ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries