ಸಮರಸ ಚಿತ್ರಸುದ್ದಿ: ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ, ಕ್ಯಾಂಪ್ಕೋ ಮುಳಿಯಾರ್ ಶಾಖೆಯ ಸಕ್ರಿಯ ಸದಸ್ಯ ಗೋಪಾಲನ್ ನಾಯರ್ ಇವರ ಆಸ್ಪತ್ರೆ ಚಿಕಿತ್ಸಾ ವೆಚ್ಚ ಸಹಾಯ ಧನ ರೂ.52,479 ವನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಸತ್ಯನಾರಾಯಣ ಪ್ರಸಾದ್ ಸದಸ್ಯರ ನಿವಾಸದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ, ಮುಳಿಯಾರು ಶಾಖಾ ವ್ಯವಸ್ಥಾಪಕ ಸಂದೀಪ್ ರೈ ಉಪಸ್ಥಿತರಿದ್ದರು.

.jpg)
