ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‍ರಿಗೆ ಬಿಜೆಪಿ ಮಂಜೇಶ್ವರ ಪಂ. ಸಮಿತಿ ವತಿಯಿಂದ ತೂಮಿನಾಡುನಲ್ಲಿ ಸ್ವಾಗತ ನೀಡಲಾಯಿತು.
ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ ಹೊರ ಬಂದ ಬಳಿಕ ಮಂಗಳವಾರ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ನಡೆದ ಸಭೆಯಲ್ಲಿ ಕೆ. ಸುರೇಂದ್ರನ್ ಮಾತನಾಡಿ, ಮಂಜೇಶ್ವರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಕಳೆದ 40 ವರ್ಷಗಳಿಂದ ಇಲ್ಲಿ ಗೆಲ್ಲುತ್ತಿರುವ ಪಕ್ಷಗಳು ಮಂಜೇಶ್ವರವನ್ನು ಹಿಂದುಳಿದ ಪ್ರದೇಶವನ್ನಾಗಿ ಮಾಡಿರುವುದಾಗಿ ಅವರು ಆರೋಪಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಬಿಜೆಪಿಗೆ ಮತನೀಡಿ ಕೆ. ಸುರೇಂದ್ರನ್‍ರನ್ನು ಗೆಲ್ಲಿಸಲು ಕರೆ ನೀಡಿದರು. ಮುಖಂಡರಾದ ಯಾದವ ಬಡಾಜೆ, ಪದ್ಮನಾಭ ಕಡಪ್ಪುರ, ನವೀನ್‍ರಾಜ್, ಸುರೇಶ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಪವನ್ ಅಂಜರೆ, ಆಶಾಲತಾ, ರಾಜೇಶ್ ತೂಮಿನಾಡು, ಸಂತೋಷ್ ಅಡ್ಕ ಉಪಸ್ಥಿತರಿದ್ದರು.

.jpg)
.jpg)
