HEALTH TIPS

ನೀವೇ ಯುದ್ಧ ಮಾಡುವ ಅಂದಿದ್ದು: ಪೀಟ್ ಹೆಗ್ಸೆತ್ ಮೇಲೆ ಗೂಬೆ ಕೂರಿಸಿದ ಟ್ರಂಪ್‌

 ವಾಷಿಂಗ್ಟನ್‌: 'ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವಂತೆ ಮೊದಲು ಹೇಳಿದ್ದು ನೀವೇ...' ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 


ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯು ನಾಲ್ಕನೇ ವಾರಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಮೆಂಫಿಸ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಟ್ರಂಪ್, 'ಪೀಟ್... ಈ ಬಗ್ಗೆ ಮೊದಲು ಮಾತನಾಡಿದವರು ನೀವೇ ಎಂದು ನಾನು ಭಾವಿಸುತ್ತೇನೆ. ಅವರು(ಇರಾನ್‌) ಪರಮಾಣು ಅಸ್ತ್ರ ಹೊಂದುವುದನ್ನು ನಾವು ಅನುಮತಿಸಲು ಸಾಧ್ಯವಿಲ್ಲ. ಹಾಗಾಗಿ ಸೇನಾ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಹೇಳಿದ್ದೀರಿ' ಎಂದಿದ್ದಾರೆ.

ಮುಂದುವರಿದು, 'ಪಶ್ಚಿಮ ಏಷ್ಯಾದ ಸಮಸ್ಯೆ ಬಗ್ಗೆ ಪೀಟ್‌ ಹೆಗ್ಸತ್, ಜನರಲ್‌ ಕೇನ್‌ ಸೇರಿ ಅನೇಕರಿಗೆ ಕರೆ ಮಾಡಿದ್ದೆ. ಈ ಸಮಸ್ಯೆ ಪರಿಹರಿಸಲು ನಮ್ಮ ಮುಂದೆ ಎರಡು ಆಯ್ಕೆಗಳಿದ್ದವು. ಒಂದೋ ಸುಮ್ಮನಿರುವುದು, ಇಲ್ಲವೇ ಬೆದರಿಕೆಯನ್ನು ಹತ್ತಿಕ್ಕುವುದು' ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಇರಾನ್‌-ಅಮೆರಿಕ ಸಂಘರ್ಷದ ಬಗ್ಗೆ ಉನ್ನತ ಅಧಿಕಾರಿಗಳಿಂದಲೇ ಭಿನ್ನ ಹೇಳಿಕೆಗಳು ಬರುತ್ತಿವೆ. ಅಮೆರಿಕದ ಮಧ್ಯಪ್ರವೇಶಕ್ಕೆ ಇಸ್ರೇಲ್‌ ಕಾರಣ ಎಂದು ಕೆಲವರು ವಾದಿಸಿದರೆ, ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಹತ್ತಿರವಿರುವುದು ಈ ಕ್ರಮಕ್ಕೆ ಪ್ರೇರೇಪಿಸಿತು ಎಂದು ಇನ್ನು ಕೆಲವರು ಪ್ರತಿಪಾದಿಸುತ್ತಿದ್ದಾರೆ.

ಇದರ ನಡುವೆ ಸ್ವತಃ ಅಧ್ಯಕ್ಷರಿಂದಲೇ ಅಸಮಂಜಸ ಹೇಳಿಕಗಳು ಬರುತ್ತಿರುವುದು ಇದರ ಬಗ್ಗೆ ಇನ್ನಷ್ಟು ಗೊಂದಲಗಳಿಗೆ ಕಾರಣವಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries