ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪೆÇಯಿನಾಚಿಯಲ್ಲಿ ದಂಪತಿ ಮೃತದೇಹ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆÇಯಿನಾಚಿ ಪರಂಬ ನಿವಾಸಿಗಳಾದ ವೇಣುಗೋಪಾಲನ್ ನಾಯರ್(55) ಹಾಗೂ ಪತ್ನಿ ಸ್ಮಿತಾ(45)ಸಾಗೀಡಾದವರು.
ಇತ್ತೀಚೆಗೆ ಬೇಕಲದಲ್ಲಿ ನಡೆದ ಬೇಕಲ್ ಫೆಸ್ಟ್ ಸಂದರ್ಭ ಸಾಂಸ್ಕತಿಕ ಕಾರ್ಯಕ್ರಮದ ವೀಕ್ಷಣೆಗೆ ತೆರಳಿದ್ದ ತಮ್ಮ ಪುತ್ರ, ಮಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿರಿಂಗ್ ವಿದ್ಯಾರ್ಥಿಯಾಗಿದ್ದ ಎಂ. ಶಿವಾನಂದನ್(19)ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ನಂತರ ದಂಪತಿ ಖಿನ್ನತೆಗೊಳಗಾಗಿದ್ದರೆನ್ನಲಾಗಿದೆ. ಬೆಳಗ್ಗೆ ಮನೆಯ ಮುಖ್ಯ ಹಾಲ್‍ನಲ್ಲಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಶಿವಾನಂದನ್ ಸಾವಿನ ನಂತರ ಸ್ಮಿತಾ ಅವರ ತಾಯಿ, ಇವರ ಜತೆಗೇ ವಾಸಿಸುತ್ತಿದ್ದು, ಗುರುವಾರ ಇವರ ಸ್ವಂತ ಮನೆಗೆ ತೆರಳಿದ್ದರು.
ಮನೆ ಬಾಗಿಲು ತೆರೆಯದಿದ್ದ ಕಾರಣ, ಆಸುಪಾಸಿನವರು ಆಗಮಿಸಿದಾಗ ಬಾಗಿಲು ಒಳಗಿಂದ ಚಿಲಕಹಾಕಿರುವುದು ಕಂಡುಬಂದಿದ್ದು, ತಪಾಸಣೆ ನಡೆಸಿದಾಘ ಇಬ್ಬರೂ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು. ಮೇಲ್ಪರಂಬ ಠಾಣೆಎ ಪೊಲೀಸರು ಸ್ಥಳಕ್ಕಾಗಮಿಸಿ ಮನೆಯಲ್ಲಿ ಹುಡುಕಾಟ ನಡೆಸಿದಾಗ ಇವರುಬರೆದಿಟ್ಟದ್ದೆನ್ನಲಾದ ಪತ್ರವೊಂದು ಲಭಿಸಿದ್ದು, ಇದರಲ್ಲಿ ಪುತ್ರನ ಅಗಲುವಿಕೆಯ ಶೋಕದಿಂದ ಕೃತ್ಯವೆಸಗಿರುವುದಾಗಿ ನಮೂದಿಸಲಾಗಿತ್ತು. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.



