HEALTH TIPS

ಕೇರಳವನ್ನು ಗಲಭೆಗ್ರಸ್ತ ಪ್ರದೇಶವಾಗಿಸುವ ತಂತ್ರ ವಿರುದ್ಧ ಕಾಸರಗೋಡಲ್ಲಿ ಕೆಎಸ್‍ಯು ಪ್ರತಿಭಟನೆ

ಕಾಸರಗೋಡು: ಆರೋಗ್ಯ ಇಲಾಖೆಯ ನಿರಂತರ ವೈಫಲ್ಯ ಮುಚ್ಚಿಹಾಕುವ ನಿಟ್ಟಿನಲ್ಲಿ ಕೇರಳ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ಅವರು ಎಸ್‍ಎಫ್‍ಐ ಮತ್ತು ಡಿವೈಎಫ್‍ಐ ಕಾರ್ಯಕರ್ತರನ್ನು ಬೀದಿಗೆ ತಂದು ಕೇರಳವನ್ನು ಗಲಭೆ ವಲಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಎಸ್‍ಯು ಜಿಲ್ಲಾಧ್ಯಕ್ಷ ವಕೀಲ ಜಾವಾದ್ ಪುತ್ತೂರು ತಿಳಿಸಿದ್ದಾರೆ.


ಅವರು ಕೆಎಸ್‍ಯು ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ರಾಜ್ಯವ್ಯಾಪಕವಾಗಿ ನಡೆದುಬರುತ್ತಿರುವ ಪ್ರತಿಭಟನೆಯ ಅಂಗವಾಘಿ ಕಾಸರಗೋಡು ನಗರದಲ್ಲಿ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಪ್ರತಿಭಟನೆಯಲ್ಲಿ  ಸಚಿವೆ ವೀಣಾ ಜಾರ್ಜ್ ಅವರ ಪ್ರತಿಕೃತಿಯನ್ನು ದಹಿಸಲಾಯಿತು. ಕೆಎಸ್‍ಯು ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಸುವ ಹಲ್ಲೆ ಮತ್ತು ಪೆÇಲೀಸರ ಸಹಾಯದಿಂದ ಪಕ್ಷದ ಧ್ವಜಸ್ತಂಬ, ಕಚೇರಿ ನಾಶಮಾಡುವ  ತೀರ್ಮಾನವನ್ನು ಎದುರಿಸಲು ಕೆಎಸ್‍ಯು ಸನ್ನದ್ಧವಾಗಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಕೆಎಸ್‍ಯು ಜಿಲ್ಲಾ ಪದಾಧಿಕಾರಿಗಳಾದ ನುಹ್ಮಾನ್ ಪಳ್ಳಂಗೋಡ್, ಅನ್ಸಾರಿ ಕೋಟಕುಂಜೆ, ಕೆ ಮಣಿಕಂಠನ್, ಚಂದ್ರಕಲಾ, ಜಿಷ್ಣು ಕಾಡಗಂ, ಆದರ್ಶ ಕಾನತ್ತೂರು, ಸುಜಿತ್ ಕೆ, ವೈಷ್ಣವ್ ಕೋಳಿಚ್ಚಲ್, ಮಹಮ್ಮದ್ ಶಾಜಾ, ಅಖಿಲ್ ರಾಜ್, ಅಭಿರಾಮ್ ಕಲ್ಯೋಟ್ ಮೊದಲಾದವರು ನೇತೃತ್ವ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries