ಕಾಸರಗೋಡು: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‍ಡಿಎ) ಉದುಮ ಕ್ಷೇತ್ರದ ಚುನಾವಣಾ ಪ್ರಚಾರದ ಅಂಗವಾಗಿ ಗೋಡೆಬರಹದ ಉದ್ಘಾಟನೆಯನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನು ಲಾಲ್ ಮೇಲತ್ ಉದ್ಘಾಟಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಎನ್.ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮನ್ ಕೆ.ಟಿ., ಮಂಡಲ ಅಧ್ಯಕ್ಷೆ ಶೈನಿ ಮೋಳ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರನ್ ಪೆರಿಯ ಪ್ರದೀಪ್ ಕೂಟಕಣಿ, ಮಂಡಲ ಉಪಾಧ್ಯಕ್ಷೆ ಶೋಭಾ ತಾಯತ್ತೋಡಿ, ಮಂಡಲಕಾರ್ಯದರ್ಶಿಗಳಾದ ಶ್ಯಾಮ್ ಕಾಶಿ, ಸೌಮ್ಯ ಪದ್ಮನಾಭನ್, ಮಂಡಲ ಸಮಿತಿ ಕೋಶಾಧಿಕಾರಿ ರತೀಶ್ ವಿ.ಎ, ಹಾಗೂ ಮಹಿಳಾ ಮೋರ್ಚಾ ಮಂಡಲ ಕಾರ್ಯದರ್ಶಿ ರಾಧಿಕಾ ಟಿ ಉಪಸ್ಥಿತರಿದ್ದರು.


