ಕಾಸರಗೋಡು: ನಗರದ ಬಿಇಎಂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 2025-26ನೇ ಸಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಲಾ ರಕ್ಷಕ ಶೀಕ್ಷಕ ಸಂಘದ ಅದ್ಯಕ್ಷ ಹಾಗೂ ನಗರಸಭಾ ಸದಸ್ಯ ಹರೀಶ್ ಕೆ.ಆರ್ ಉದ್ಘಾಟಿಸಿದರು.
ಶಾಲಾ ಮುಖ್ಯ ಶಿಕ್ಷಕ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗಿರುವ ಪ್ರತಿಭಾ ಪುರಸ್ಕಾರವನ್ನು ಶಾಲಾ ಎಸ್.ಎಂ.ಸಿ ಅಧ್ಯಕ್ಷ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ ವಿತರಿಸಿದರು. ಹಿರಿಯ ಶಿಕ್ಷಕಿ ಶಾಂತಾ ಕುಮಾರಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಿಕ್ಷಕಿಯರದ ಸಂಧ್ಯಾ ಸ್ವಾಗತಿಸಿದರು. ರೋಹಿತಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಯಶವಂತ ಮಾಸ್ತರ್ ವಂದಿಸಿದರು.


