ಕಾಸರಗೋಡು: ಹನ್ನೊಂದರ ಹರೆಯದ ಬಾಲಕಗೆ ಸಲಿಂಗರತಿ ಕಿರುಕುಳ ಪ್ರಕರಣದ ಅಪರಾಧಿ, ವಲಿಯಪರಂಬ ಇಡಯಿಲಕ್ಕಾಡ್ ನಿವಾಸಿ ಬಿಂದು ಕುಮಾರ್ ಅಲಿಯಾಸ್ ನಂದನ್(53)ಎಂಬತನಿಗೆ ಹೊಸದುರ್ಗದ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ ಸುರೇಶ್ ಅವರು ವಿವಿಧ ಕಾಯ್ದೆಗಳನ್ವಯ 30ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 35ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚಿನ ಶಿಕ್ಷೆ ಅನುಭವಿಸಬೇಕಾಗಿದೆ. 2024 ಮಾ. 3ರಂದು ಕೋತಿ ತೋರಿಸುವುದಾಗಿ ಬಾಲಕನನ್ನು ಸ್ಕೂಟರಲ್ಲಿ ತನ್ನ ಮನೆಗೆ ಕರೆದೊಯ್ದು ಕಿರುಕುಳ ನೀಡಿರುವ ದೂರಿನನ್ವಯ ಚಂದೇರ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.

