HEALTH TIPS

ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವತಿಗೆ HIV ಸೋಂಕಿತ ರಕ್ತ ಚುಚ್ಚಿದ ಯುವಕ

ಹೈದರಾಬಾದ್: ಮದುವೆ ಮುರಿದು ಬಿದ್ದ ಕಾರಣದಿಂದ ಕೋಪಗೊಂಡ 24 ವರ್ಷದ ಯುವಕನೊಬ್ಬ ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ 22 ವರ್ಷದ ಯುವತಿಗೆ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚಿರುವ ಆರೋಪದಡಿ ಘಟನೆ ಮಾರ್ಚ್‌ 11ರಂದು ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿ ಮತ್ತು ‌ಸಂತ್ರಸ್ತೆ ಸಂಬಂಧಿಕರಾಗಿದ್ದು, ಯುವಕನಿಗೆ ಎಚ್‌ಐವಿ ಸೋಂಕು ದೃಢಪಟ್ಟಿದ್ದ ಕಾರಣ, ವಧುವಿನ ಪೋಷಕರು ಮದುವೆಯನ್ನು ರದ್ಧು ಮಾಡಿದ್ದರು. ಈ ದ್ವೇಷದಿಂದ ಆರೋಪಿಯು ಯುವತಿಯ ಮನೆಯಲ್ಲಿ ಆಕೆಗೆ ಬಲವಂತವಾಗಿ ತನ್ನ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ ಎಂದು ಆಕೆಯ ಕುಟುಂಬದವರು ದೂರು ನೀಡಿದ್ದಾರೆ.

'ಯುವಕನ ಪೋಷಕರು ಈಗಾಗಲೆ ಎಚ್‌ಐವಿ ಪೀಡಿತರಾಗಿದ್ದರಿಂದ, ಯುವತಿಯ ಪೋಷಕರು ಕಳೆದ ಸೆಪ್ಟೆಂಬರ್‌ನಲ್ಲಿ ಯುವಕನ ರಕ್ತ ಪರೀಕ್ಷೆ ನಡೆಸಿದ್ದರು. ಯುವತಿಗೂ ಎಚ್‌ಐವಿ ಸೋಂಕು ತಗುಲಿದರೆ, ಆಕೆ ಶಾಶ್ವತವಾಗಿ ತನ್ನೊಂದಿಗೆ ಇರುತ್ತಾಳೆ ಎಂದು ಭಾವಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries