HEALTH TIPS

ʼಟೂರಿಸ್ಟ್ʼಆಗಿ ಬಂದು ಭಾರತದಲ್ಲಿ ಡ್ರೋನ್ ಯುದ್ಧ ತರಬೇತಿ?: ವಿದೇಶಿ ಗುಪ್ತ ಜಾಲ ಬಯಲಿಗೆಳೆದ NIA

ನವದೆಹಲಿ :ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಸೋಗಿನಲ್ಲಿ ಭಾರತ ಪ್ರವೇಶಿಸಿದ್ದ ಅಮೆರಿಕನ್ ಪ್ರಜೆ ಮ್ಯಾಥ್ಯೂ ವ್ಯಾನ್ಡೈಕ್ ಸೇರಿದಂತೆ ಏಳು ವಿದೇಶಿ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿರುವುದು ದೇಶದ ಭದ್ರತೆ ಕುರಿತು ಗಂಭೀರ ಚಿಂತೆಯನ್ನು ಹುಟ್ಟಿಸಿದೆ.

ಬಂಧಿತರಲ್ಲಿ ಆರು ಮಂದಿ ಉಕ್ರೇನಿಯನ್ ಬಾಡಿಗೆ ಸೈನಿಕರಿದ್ದು, ಇವರು ಮ್ಯಾನ್ಮಾರ್ ನಲ್ಲಿನ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧ ತರಬೇತಿ ನೀಡಿದ ಆರೋಪ ಎದುರಿಸುತ್ತಿದ್ದಾರೆ. 


ಮಾರ್ಚ್ 13ರಂದು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಮ್ಯಾಥ್ಯೂ ವ್ಯಾನ್ ಡೈಕ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಓIಂಗೆ ಹಸ್ತಾಂತರಿಸಲಾಯಿತು. ಅದೇ ದಿನ ಲಕ್ನೋ ಮತ್ತು ದಿಲ್ಲಿ ವಿಮಾನ ನಿಲ್ದಾಣಗಳಲ್ಲಿ ಆರು ಉಕ್ರೇನಿಯನ್ ಪ್ರಜೆಗಳನ್ನೂ ವಶಕ್ಕೆ ಪಡೆಯಲಾಯಿತು.

ಮಾರ್ಚ್ 15ರಂದು ಬಂಧಿತರನ್ನು ದಿಲ್ಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ಪ್ರಕರಣದ ಹಿನ್ನಲೆ ಬೆಳಕಿಗೆ ಬಂತು. ಪ್ರವಾಸಿ ವೀಸಾದಲ್ಲಿ ಭಾರತ ಪ್ರವೇಶಿಸಿದ್ದ ಈ ಏಳು ಮಂದಿ, ವಾಸ್ತವದಲ್ಲಿ ಮ್ಯಾನ್ಮಾರ್ ಗೆ ರಹಸ್ಯ ಕಾರ್ಯಾಚರಣೆಗೆ ತೆರಳಿದ್ದರೆಂಬ ಶಂಕೆ ವ್ಯಕ್ತವಾಗಿದೆ.

NIA ಪ್ರಕಾರ, ಆರೋಪಿಗಳು ಮೊದಲು ಅಸ್ಸಾಂನ ಗುವಾಹಟಿ ತಲುಪಿ, ನಂತರ ನಿರ್ಬಂಧಿತ ಲೈನ್ ಪರ್ಮಿಟ್ ಇಲ್ಲದೆ ಮಿಜೋರಾಂ ಮೂಲಕ ಮ್ಯಾನ್ಮಾರ್ ಗಡಿಯನ್ನು ಅಕ್ರಮವಾಗಿ ದಾಟಿದ್ದಾರೆ. ಅಲ್ಲಿ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧ ತರಬೇತಿ ನೀಡಿದ್ದು ಮಾತ್ರವಲ್ಲದೆ, ಶಸ್ತ್ರಾಸ್ತ್ರ ಪೂರೈಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಕಾರ್ಯಾಚರಣೆ ಮುಗಿಸಿ ಭಾರತಕ್ಕೆ ಹಿಂತಿರುಗುತ್ತಿದ್ದ ವೇಳೆ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದರು. ನ್ಯಾಯಾಲಯವು ಅವರನ್ನು 11 ದಿನಗಳ ಕಸ್ಟಡಿಗೆ ಒಪ್ಪಿಸಿದೆ.

ಬಂಧಿತರಲ್ಲಿರುವ ಅಮೆರಿಕನ್ ಪ್ರಜೆ ಮ್ಯಾಥ್ಯೂ ವ್ಯಾನ್ಡೈಕ್ ವಿವಾದಿತ ವ್ಯಕ್ತಿಯಾಗಿದ್ದು, ವಿಶ್ವದ ವಿವಿಧ ಸಂಘರ್ಷ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವುದು ಗಮನಾರ್ಹ. ಲಿಬಿಯಾ, ಸಿರಿಯಾ, ಉಕ್ರೇನ್ ಮತ್ತು ವೆನೆಜುವೆಲಾ ಸೇರಿದಂತೆ ಅನೇಕ ಯುದ್ಧಪೀಡಿತ ಪ್ರದೇಶಗಳಲ್ಲಿ ಆತ ಕಾಣಿಸಿಕೊಂಡಿದ್ದಾನೆ. ತನ್ನನ್ನು ಡಾಕ್ಯುಮೆಂಟರಿ ಮೇಕರ್, ಯುದ್ಧ ವರದಿಗಾರ ಹಾಗೂ ರಕ್ಷಣಾ ತಜ್ಞ ಎಂದು ಪರಿಚಯಿಸಿಕೊಂಡಿರುವ ಆತನ ಬಗ್ಗೆ ಕೆಲವು ವಲಯಗಳು ಸಿಐಎ ಸಂಪರ್ಕವಿದೆ ಎಂಬ ಅನುಮಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಬಾಡಿಗೆ ಸೈನಿಕರು ಎಂದು ಹೇಳುತ್ತಿವೆ.

ಆರು ಉಕ್ರೇನಿಯನ್ ನಾಗರಿಕರ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿ ಉಕ್ರೇನ್ ರಾಯಭಾರ ಕಚೇರಿ ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತಿಭಟನೆ ಸಲ್ಲಿಸಿದೆ. ಆದರೆ ಮ್ಯಾಥ್ಯೂ ವ್ಯಾನ್ಡೈಕ್ ವಿಚಾರದಲ್ಲಿ ಅಮೆರಿಕ ರಾಯಭಾರ ಕಚೇರಿ ಸಕ್ರಿಯ ಪ್ರತಿಕ್ರಿಯೆ ನೀಡಿಲ್ಲವೆಂದು ತಿಳಿದುಬಂದಿದೆ.

ಪ್ರಕರಣವು ದೇಶದ ಗಡಿ ಭದ್ರತೆ ಹಾಗೂ ವೀಸಾ ವ್ಯವಸ್ಥೆಯ ದುರುಪಯೋಗ ಕುರಿತು ಆತಂಕ ಹೆಚ್ಚಿಸಿದೆ. ಮಿಜೋರಾಂ ಮೂಲಕ ವಿದೇಶಿ ಬಾಡಿಗೆ ಸೈನಿಕರು ಮ್ಯಾನ್ಮಾರ್ ಪ್ರವೇಶಿಸುವ ಪ್ರಯತ್ನಗಳ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದ ಹಿನ್ನೆಲೆಯಲ್ಲಿ, ತನಿಖೆ ತೀವ್ರಗೊಳಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 27ಕ್ಕೆ ನಿಗದಿಯಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries