HEALTH TIPS

ಮುಟ್ಟಿನ ರಜೆ ಕಡ್ಡಾಯ: ಮಹಿಳೆಯರಿಗೆ ಯಾರೂ ಉದ್ಯೋಗ ಕೊಡಲ್ಲ ಎಂದ SC

ನವದೆಹಲಿ: ಮಹಿಳಾ ಉದ್ಯೋಗಿಗಳು, ವಿದ್ಯಾರ್ಥಿನಿಯರಿಗೆ ರಾಷ್ಟ್ರದಾದ್ಯಂತ ಮುಟ್ಟಿನ ರಜೆ ಕಡ್ಡಾಯಗೊಳಿಸಲು ನೀತಿ ರೂಪಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಅಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಯಾರೂ ಉದ್ಯೋಗ ನೀಡುವುದಿಲ್ಲ ಎಂದು ಹೇಳಿದೆ.
'ಈ ಮನವಿಗಳನ್ನು ಮಹಿಳೆಯರಲ್ಲಿ ಕೀಳರಿಮೆ ಮೂಡಿಸಲು, ಮುಟ್ಟೆಂದರೆ ಅವರಿಗೆ ಏನೊ ಕೆಟ್ಟದಾಗಿದೆ ಎಂಬ ಭಯವನ್ನು ಸೃಷ್ಟಿಸಲು ಮಾಡಲಾಗಿದೆ. ಇದು ಮಹಿಳೆಯರ ದೃಢವಾದ ಹಕ್ಕು. ಆದರೆ, ವೇತನ ಸಹಿತ ರಜೆ ನೀಡಬೇಕಾದ ಉದ್ಯೋಗದಾತರ ಬಗ್ಗೆ ಯೋಚಿಸಿ' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಹೇಳಿದೆ.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಎಂ.ಆರ್. ಶಂಷದ್‌, ಕೆಲವು ರಾಜ್ಯಗಳು ಮತ್ತು ಸಂಸ್ಥೆಗಳು ಈಗಾಗಲೇ ಮುಟ್ಟಿನ ರಜೆಗೆ ಅವಕಾಶ ಕಲ್ಪಿಸಲು ಕ್ರಮಗಳನ್ನು ತೆಗೆದುಕೊಂಡಿವೆ ಎಂದು ನ್ಯಾಯಾಲಯದ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ಸ್ವಯಂಪ್ರೇರಿತ ನೀತಿಗಳು ಸ್ವಾಗತಾರ್ಹ ಎಂದರು. ಆದರೆ, ಕಾನೂನಿನ ಮೂಲಕ ಅಂತಹ ನಿಯಮಗಳನ್ನು ಕಡ್ಡಾಯಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು.

'ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡುವುದು ಅತ್ಯುತ್ತಮ. ಕಾನೂನಿನಡಿ ಅದನ್ನು ಕಡ್ಡಾಯ ಎಂದು ನೀವು ಹೇಳಿದ ತಕ್ಷಣ, ಯಾರೂ ಅವರಿಗೆ ಉದ್ಯೋಗ ನೀಡುವುದಿಲ್ಲ. ನ್ಯಾಯಾಂಗ ವ್ಯವಸ್ಥೆ ಅಥವಾ ಸರ್ಕಾರಿ ಉದ್ಯೋಗ ಎಲ್ಲೇ ಆದರೂ ಯಾರೂ ಅವರನ್ನು ತೆಗೆದುಕೊಳ್ಳುವುದಿಲ್ಲ. ಅವರ ವೃತ್ತಿಜೀವನವು ಕೊನೆಗೊಳ್ಳುತ್ತದೆ. ನೀವು ಮನೆಯಲ್ಲೇ ಕುಳಿತುಕೊಳ್ಳಿ ಎಂದು ಅವರಿಗೆ ಹೇಳುತ್ತಾರೆ' ಎಂಬುದಾಗಿ ಸಿಜೆಐ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries