HEALTH TIPS

West Bengal Poll: ಆರ್.ಜಿ.ಕರ್ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಬಿಜೆಪಿ ಟಿಕೆಟ್

 ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ 19 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ. ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ, ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ ರತ್ನ ದೇಬನಾಥ್ ಅವರಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. 


2025ರ ಆಗಸ್ಟ್ 9ರಂದು ವೈದ್ಯೆ ಮೇಲೆ ಸಂಜಯ್ ರಾಯ್ ಎಂಬಾತ ಅತ್ಯಾಚಾರವೆಸಗಿ, ಕೊಲೆಗೈದಿದ್ದ. ಅಪರಾಧಿಗೆ ಸ್ಥಳೀಯ ನ್ಯಾಯಾಲಯ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದೀಗ, ‌ಸಂತ್ರಸ್ಥೆಯ ತಾಯಿಯನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆ. ಅವರು ಉತ್ತರ 24 ಪರಗಣ ಜಿಲ್ಲೆಯ ಪಣಿಹತಿ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ.

ಬಿಜೆಪಿ ಟಿಕೆಟ್‌ ಘೋಷಣೆ ಬಳಿಕ ಮಾತನಾಡಿರುವ ಅವರು, 'ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ನೋವಿನ ಜವಾಬ್ದಾರಿಯಾಗಿದೆ. ನಾನು ಅಭ್ಯರ್ಥಿಯಾಗಿದ್ದೇನೆ. ಗೆದ್ದರೆ, ಪಣಿಹತಿಯ ಜನರೂ ಗೆದ್ದಂತೆಯೇ. ಕ್ಷೇತ್ರದ ಸ್ಥಿತಿಯನ್ನು ಸುಧಾರಿಸಲು ಮತ್ತು ಜನರಿಗೆ ಸೇವೆ ಸಲ್ಲಿಸಲು ಕೆಲಸ ಮಾಡುತ್ತೇನೆ. ಜನರ ಕಷ್ಟಕ್ಕೆ ಧ್ವನಿಯಾದರೆ ನನ್ನ ಮಗಳಿಗೂ ಸಂತೋಷವಾಗುತ್ತದೆ. ಪಶ್ಚಿಮ ಬಂಗಾಳದಾದ್ಯಂತ ಕಮಲ ಅರಳಬೇಕು. ಟಿಎಂಸಿಯನ್ನು ಬೇರು ಸಮೇತ ಕಿತ್ತುಹಾಕಬೇಕೆಂದು ಬಯಸುತ್ತೇನೆ' ಎಂದು ಹೇಳಿದ್ದಾರೆ.

ಬುಧವಾರ ಬಿಡುಗಡೆಯಾದ ಬಿಜೆಪಿಯ ಮೂರನೇ ಪಟ್ಟಿಯಲ್ಲಿ, ರತೀಂದ್ರ ನಾಥ್ ಬೋಸ್ ಕೂಚ್ ಬೆಹಾರ್ ದಕ್ಷಿಣದಿಂದ ಸ್ಪರ್ಧಿಸಲಿದ್ದಾರೆ. ಚಿತ್ರಜಿತ್ ರಾಯ್ ಇಸ್ಲಾಂಪುರದಿಂದ ಮತ್ತು ಅರೂಪ್ ಕುಮಾರ್ ದಾಸ್ ಸಿಂಗೂರಿನಿಂದ ಸ್ಪರ್ಧಿಸಲಿದ್ದಾರೆ.

ಹೌರಾ ಸೆಂಟಲ್‌ ಕ್ಷೇತ್ರದಿಂದ ಬಿಪ್ಲಬ್ ಮಂಡಲ್, ಮೇದಿನಿಪುರದಿಂದ ಶಂಕರ್ ಗುಚ್ಚೈತ್, ನೈಹಟಿಯಿಂದ ಅನಿಲ್ ಸಿಂಗ್, ಚುಂಚುರಾದಿಂದ ಸುಬೀರ್ ನಾಗ್ ಮತ್ತು ಉತ್ತರಪಾರಾದಿಂದ ದೀಪಾಂಜನ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸಲಾಗಿದೆ.

ಮಧುಮಿತಾ ಘೋಷ್ ಹರಿಪಾಲ್‌ನಿಂದ ಸ್ಪರ್ಧಿಸಲಿದ್ದು, ದಿನೇಶ್ ಸರ್ಕಾರ್ (ರಾಯಗಂಜ್), ಹರಿಪಾದ ಬರ್ಮನ್ (ಹೆಮ್ತಾಬಾದ್), ಅಮ್ಲನ್ ಭಾದುರಿ (ಇಂಗ್ಲಿಷ್ ಬಜಾರ್), ಸ್ವಪನ್ ದಾಸ್ (ಶಾಂತಿಪುರ), ದೀಪಾಂಜನ್ ಕುಮಾರ್ ಗುಹಾ (ಚಂದನನಗರ), ಹರೇಕೃಷ್ಣ ಬೇರಾ (ತಮ್ಲುಕ್) ಮತ್ತು ಪ್ರಣಕೃಷ್ಣ ತಪದರ್ (ಪುರ್ಬಸ್ತಲಿ), ಕೃಷ್ಣ ಘೋಷ್ ಕಟ್ವಾದಿಂದ, ಕೃಷ್ಣಕಾಂತ ಸಹಾ ಸೈಂಥಿಯಾದಿಂದ ಮತ್ತು ಅನಿಲ್ ಸಿಂಗ್ ನಲ್ಹಟಿಯಿಂದ ಸ್ಪರ್ಧಿಸಲಿದ್ದಾರೆ.

294 ವಿಧಾನಸಭಾ ಸ್ಥಾನಗಳಲ್ಲಿ 275 ಸ್ಥಾನಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದೆ. ಉಳಿದ, 19 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಇನ್ನಷ್ಟೇ ಘೋಷಿಸಲಿದೆ.

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries