HEALTH TIPS

ಮೇ 16 ರಂದು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ವತಿಯಿಂದ 'ದತ್ತಿನಿಧಿ ಪ್ರಶಸ್ತಿ, ಕನ್ನಡ ಸಂಸ್ಕøತಿ ಉತ್ಸವ

ಕುಂಬಳೆ: ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ 5ನೇ ವರ್ಷದ 'ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕøತಿ ಉತ್ಸವ-2026'   ಮೇ 16ರಂದು ಕುಡಾಲುಮೆರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ.


ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆ ಶಾಲೆಯಲ್ಲಿ ನಡೆಯಿತು. ಕಾಸರಗೋಡು ಜಿಪಂ ಸದಸ್ಯ ಸೋಮಶೇಖರ ಜೆ.ಎಸ್. ಸಮಾರಂಭ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಬಿ.ಎ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಬಶೀರ್ ಕೊಟ್ಟೂಡಲ್, ಪೈವಳಿಕೆ ಗ್ರಾಪಂ ಸದಸ್ಯರಾದ ಶಶಿಕಲಾ ರೈ ಹಾಗೂ ಅಜೀಜ್ ಚೇವಾರ್,  ವಕೀಲ ಥಾಮಸ್ ಡಿ ಸೋಜಾ, ಲಕ್ಷ್ಮಣ ಪ್ರಭು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ರವಿ ನಾಯ್ಕಾಪು ಸ್ವಾಗತಿಸಿದರು. ಗೌರವಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ  ಸ್ವಾಗತ ಸಮಿತಿ ರಚಿಸಲಾಯಿತು.  ಬಿ.ಎ. ಖಾದರ್ ಹಾಜಿ ಗೌರವಾಧ್ಯಕ್ಷ, ಸೋಮಶೇಖರ ಜೆ.ಎಸ್ ಅಧ್ಯಕ್ಷ, ಬಿ.ಎ. ಬಶೀರ್ ಉಪಾಧ್ಯಕ್ಷ, ಅಶೋಕ ಭಂಡಾರಿ ಪ್ರಧಾನ ಸಂಚಾಲಕ,  ಮುಹಮ್ಮದಲಿ ಬಿ. ಕೆ ಹಾಗೂ ಬಿ.ಎ. ಅಬ್ದುಲ್ ಲತೀಫ್ ಸಂಚಾಲಕರು,  ಶ್ರೀಕಾಂತ್ ನೆಟ್ಟಣಿಗೆ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಡಲಾಯಿತು.

ವಿವಿಧ ಉಪಸಮಿತಿಗಳಿಗೆ ಪದಾಧಿಕರಿಗಳನ್ನು ಆಯ್ಕೆ ಮಾಡಲಾಯಿತು. ಹಣಕಾಸು-ರಾಘವ ಚೇರಾಲ್ ಅಧ್ಯಕ್ಷ, ಎ.ಆರ್. ಸುಬ್ಬಯ್ಯಕಟ್ಟೆಸಂಚಾಲಕ, ಆಹಾರ-Àಶಿಕಲಾ ರೈ ಅಧ್ಯಕ್ಷೆ, ಮುಹಮ್ಮದ್ ಕುಞ, ನಳಿನಾಕ್ಷಿ, ಪುಷ್ಪಾ ಸಂಚಾಲಕಿಯರು, ಸಾಂಸ್ಕೃತಿಕ ಸಮಿತಿಗೆ ಸುಭಾಷ್ ಪೆರ್ಲ ಅಧ್ಯಕ್ಷ, ಎಸ್.ಕೆ. ಬಾಲಕೃಷ್ಣ ಸಂಚಾಲಕ, ವೇದಿಕೆ-ರವಿ ನಾಯ್ಕಾಪು ಅಧ್ಯಕ್ಷ, ರಾಧಾಕೃಷ್ಣ ಉಳಿಯತ್ತಡ್ಕ ಸಂಚಾಲಕ, ಮೆರವಣಿಗೆ ಸಮಿತಿಗೆ ಖಲೀಲ್ ಕೆ.ಕೆ.ಎಸ್ ಅಧ್ಯಕ್ಷ, ಅಬ್ಬಾಸ್, ಅಶ್ರಫ್ ಸುಬ್ಬಯ್ಯಕಟ್ಟೆ, ಬಾಪಕುಞ ಕುಡಾಲ್ ಸಂಚಾಲಕರು, ಅಲಂಕಾರ-ಮನಾಫ್ ಸುಬ್ಬಯ್ಯಕಟ್ಟೆ ಅಧ್ಯಕ್ಷ, ಆನಂದ ಲಂಕಿನಡ್ಕ, ಎಸ್.ಕೆ. ಚಂದ್ರಶೇಖರ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

ದಿನಪೂರ್ತಿ ನಡೆಯುವ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಿರಿಯ ಸಾಧಕ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ನಡೆಯಲಿದ್ದು,  ಸಚಿವರು ಸೇರಿದಂತೆ ಹಲವು ಮಂದಿ ಗಣ್ಯರು ಪಾಲ್ಗೊಳ್ಳುವರು ಎಂದು ಸಂಘದ ಪತ್ರಿಕ ಹೇಳಿಕೆಯಲ್ಲಿ ತಿಳಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries