ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಗುರುವಾರ ಭಕ್ತಿ, ಸಂಭ್ರಮದೊಂದಿಗೆ ಅಷ್ಟಬಂಧಲೇಪನ ಮತ್ತು ಬ್ರಹ್ಮಕಲಶಾಭಿಷೇಕ ನೆರವೇರಿತು. ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ದಿವ್ಯಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮದೊಂದಿಗೆ 7.34ರಿಂದ 9.37ರಮಧ್ಯೆ ವೃಷಭ ಲಗ್ನ ಶುಭಮುಹೂರ್ತದಲ್ಲಿ ಕಲಶಾಭಿಷೇಕ ನಡೆಯಿತು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳ ಸಮಾರೋಪ, ಸಾಂಸ್ಕøತಿಕ ಕರ್ಯಕ್ರಮದ ಅಂಗವಾಗಿ ಬರತನಾಟ್ಯ, ಶ್ರೀ ರಾಮನಾಥಸಾಂಸ್ಕøತಿಕ ಯಕ್ಷಗಾನ ತರಬೇತಿ ಕೇಂದ್ರ, ರಾಮನಗರ,ಕೋಟೆಕಣಿ ಇವರಿಂದ ಭಸ್ಮಾಸುರ ಮೋಹಿನಿ,ಶಬರಿಮಲೆ ಶ್ರೀ ಸ್ವಾಮಿಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.


