ಕಾಸರಗೋಡು: ಕುಂಬಳೆಯಲ್ಲಿ ಯುವಕನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪೆÇಲೀಸರ ಮುಂದೆ ಶರಣಾದ ಆರು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕುಂಟಂಗೇರಡ್ಕ ನಿವಾಸಿಗಳಾದ ಮುಹಮ್ಮದ್ ಹಾಶಿಂ ಯಾನೆ ಅಶಿಮ್, ಅಬು ಜಾಸಿಂ ಯಾನೆ ಜಾಸಿ, ರಮೀಸ್ ರೋಶಲ್ ಫಿರೋಸ್ ಯಾನೆ ರಮೀಸ್, ಮಿನ್‍ಹಾಜ್ ಅಬ್ದುಲ್ ಇ.ಕೆ. ಯಾನೆ ಮಿನ್‍ಹಾಜ್, ಫಸಲ್ ರಹ್ಮಾನ್ ಯಾನೆ ಪಜಿಲು, ಮೊಹಿಯುದ್ದೀನ್ ನಿಹಾಲ್ ಯಾನೆ ನಿಹಾಲ್ ಎಂಬಿವರು ನ್ಯಾಯಾಂಗಬಂಧನದಲ್ಲಿರುವವರು.
ಯುವತಿಯೊಂದಿಗಿನ ಪ್ರೇಮದ ವಿಷಯಕ್ಕೆ ಸಂಬಂಧಿಸಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಇವರೆಲ್ಲರೂ ಆರೋಪಿಗಳಾಗಿದ್ದಾರೆ. ತಂಡದ ಮುಖ್ಯ ಆರೋಪಿ ಆದೂರು ಪೆÇಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನ ಅಮೀನ್ ಸಫ್ವಾನ್ ವಿದೇಶಕ್ಕೆ ಪರಾರಿಯಾಗಲು ಚೆನ್ನೈ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಈತನನ್ನು ಪೊಲೀಸರು ಬಂಧಿಸಿದ್ದರು. ಅಮೀನ್ ಸಫ್ವಾನ್ ಬಂಧನದ ಮಾಹಿತಿ ಹೊರಬರುತ್ತಿದ್ದಂತೆ ಉಳಿದ ಆರೂ ಮಂದಿ ಆರೋಪಿಗಳು ಕುಂಬಳೆ ಪೊಲೀಸ್ ಠಾಣೆಗೆ ಶರಣಾಗಿದ್ದರು.
ಮಾರ್ಚ್ 30ರಂದು ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಕೃಷ್ಣನಗರ ಸಮೀಪದ ಬಸ್ ತಂಗುದಾಣ ಬಳಿ ಕುಂಬಳೆ ಮಾಟುಂಗುಲಿ ನಿವಾಸಿ ಅಪ್ನಾನ್ ಫಹದ್ (19) ಎಂಬಾತನ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ.

