ಕಾಸರಗೋಡು: ದೈವಕೋಲ ವೀಕ್ಷಿಸಲು ತೆರಳಿದ್ದ 15ರ ಹರೆಯದ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯವುಂಟಾಗಿದೆ. ಇದನ್ನು ಪ್ರಶ್ನಿಸಿದ ಬಾಲಕ ಹಾಗೂ ಆತನ ಹೆತ್ತವರನ್ನು ಹೊಡೆದು ಹಲ್ಲೆಗೈಯಲಾಗಿದ್ದು, ಈ ಬಗ್ಗೆ ಮೂರು ಮಂದಿ ವಿರುದ್ಧ ಹೊಸದುರ್ಗ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಉಪ್ಪಿಲಕೈ ಅಡುಕ್ಕತ್ತ್‍ಪರಂಬಿಲ್ ನಿವಾಸಿ 15ರ ಹರೆಯದ ಬಾಲಕನ ದೂರಿನನ್ವಯ ಪುದುಕೈ ನಿವಾಸಿಗಳಾದ ಅಭಿಲಾಷ್, ಶಿಬು, ಶಿಬಿನ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಗುರುವಾರ ನಸುಕಿಗೆ ವೇಳೆಗೆ ಚತುರಕಿಣರ್ ಕಾರಗುಳಿಗನ್ ದೈವಸ್ಥಾನದ ಸಮೀಪ ಘಟನೆ ನಡೆದಿದೆ.
ದೈವ ಕೋಲ ಕಾಣಲೆಂದು ಹೆತ್ತವರೊಂದಿಗೆ ಬಾಲಕ ತಲುಪಿದ್ದನು. ಈ ಸಂದರ್ಭ ಒಂದು ತಂಡ ಪಟಾಕಿ ಸಿಡಿಸಿದ್ದು, ಇದು ಸ್ಪೋಟಗೊಂಡು ಬಾಲಕನ ಕಾಲಿಗೆ ಗಾಯ ಉಂಟಾಗಿತ್ತು. ಇದನ್ನು ಪ್ರಶ್ನಿಸಿದಾಗ ಅಭಿಲಾಷ್ ಅವಾಚ್ಯವಾಗಿ ನಿಂದಿಸಿ ಬಾಲಕನ ಕಪಾಳಕ್ಕೆ ಥಳಿಸಿದ್ದು, ಇದನ್ನು ತಡೆಯಲು ಬಂದ ಬಾಲಕನ ತಂದೆ ಹಗೂ ತಾಐಇಗೂ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

