HEALTH TIPS

ಶ್ರೀಸ್ಕಂದ ಯಕ್ಷಗಾನ ಕೇಂದ್ರ ವತಿಯಿಂದ 'ಶ್ರೀಸ್ಕಂದ ಒಡ್ಡೋಲಗ' ಕಾರ್ಯಕ್ರಮ

ಕಾಸರಗೋಡು: ಯುವತಲೆಮಾರಿನಲ್ಲಿ ಯಕ್ಷಗಾನದ ಬಗ್ಗೆ ಹೆಚ್ಚುತ್ತಿರುವ ಅಭಿರುಚಿ ಕಲೆಯಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿರುವುದಾಗಿ ಯಕ್ಷಗುರು ರಂಜಿತ್ ಮಲ್ಲ  ತಿಳಿಸಿದ್ದಾರೆ. ಅವರು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ 'ಕಲಾವಿದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭೋಗ್ ಸಭಾಂಗಣದಲ್ಲಿ ಶ್ರೀಸ್ಕಂದ ಯಕ್ಷಗಾನಕೇಂದ್ರದ ನೇತೃತ್ವದಲ್ಲಿ ಜರಗಿದ ಶ್ರೀಸ್ಕಂದ ಒಡ್ಡೋಲಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಕೇವಲ ದೇವಸ್ಥಾನ ಅಥವಾ ಇತರ ಉತ್ಸವಗಳಲ್ಲಿ ಮಾತ್ರ ಸೀಮಿತವಾಗಿದ್ದ ಯಕ್ಷಗಾನ ಇಂದು ಪ್ರತ್ಯೇಕ ವೇದಿಕೆಯ ಮೂಲಕ ವಿವಿಧೆಡೆ ಪ್ರದರ್ಶನಗೊಳ್ಳುತ್ತಿರುವುದು ಸಂತೋಷದ ವಿಚಾರ. ಈ ನಿಟ್ಟಿನಲ್ಲಿ ಶ್ರೀಸ್ಕಂದ ಒಡ್ಡೊಲಗ ಒಂದು ವಿನೂತನ ಪ್ರಯೋಗವಾಗಿದ್ದು, ಯಕ್ಷಗಾನದ ವ್ಯಾಪ್ತಿಯನ್ನು ಇನ್ನಷ್ಟೂ ಹೆಚ್ಚಿಸಲು ಕಾರಣವಾಗಿರುವುದಾಗಿ ತಿಳಿಸಿದರು. 

ಶ್ರೀಸ್ಕಂದಕ್ಕೆ ಸಾಧ್ಯವಾಗಿದೆ ಎಂದು ಕೇಂದ್ರದ

ಹಿರಿಯ ಭಾಗವತರು ತಲ್ಪನಾಜೆವೆಂಕಟ್ರಮಣ ಭಟ್, ಧಾರ್ಮಿಕಮುಂದಾಳು ಡಾ. ವೆಂಕಟ್ರಮಣ ಹೊಳ್ಳ ಕಾಸರಗೋಡು, ಯಕ್ಷಗಾನ ಕಲಾವಿದ ಪತ್ರಕರ್ತ ವಿ ಜಿಕಾಸರಗೋಡು ಉಪಸ್ಥಿತರಿದ್ದರು.  ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿದರು.  ಹರ್ಷಕುಮಾರ್ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಮುರಳೀಧರ ಶೆಟ್ಟಿ ವಂದಿಸಿದರು,  ಕಾರ್ಯಕ್ರಮದ ಅಂಗವಾಗಿ ಕುತ್ಯಾಳ ಶ್ರೀ ಗೋಪಾಲ ಕೃಷ್ಣ ಯಕ್ಷಗಾನತರಬೇತಿ ಕೇಂದ್ರದ ಸದಸ್ಯರಿಂದ ವೇದೋದ್ಧರಣ, ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನಅಧ್ಯಂiÀನಕೇಂದ್ರದವರಿಂದ ನರಕಾಸುರಮೋಕ್ಷ, ಕೋಯಿಕ್ಕೋಡ್ ಜಿಲ್ಲೆಯ ಪ್ರೊವಿಡೆನ್ಸ್ ಹೈಯರ್ ಸೆಕಂಡರಿ ಶಾಲೆಯ ಮಕ್ಕಳಿಂದ ಸುಧನ್ವಾರ್ಜುನ ಕಾಳಗ, ಕಣ್ಣೂರಿನ ಸೈಂಟ್ ತೇರೇಸಾಸ್ ಆಂಗ್ಲೋಇಂಡಿಯನ್ ಹೈಯರ್ ಸೆಕಂಡರಿಶಾಲೆಯ ಮಕ್ಕಳಿಂದ ತರಣಿಸೇನ ಕಾಳಗ, ಪಾಯಿಚ್ಚಾಲು ಕೂಡ್ಲಿನ ಶ್ರೀಸ್ಕಂದ ಯಕ್ಷಗಾನಕೇಂದ್ರದವರಿಂದ ಮಹಿಷಮರ್ದಿನಿ ಎಂಬಕಥಾಭಾಗಗಳ ಪ್ರದರ್ಶನ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries