ಕುಂಬಳೆ: ಸ್ಕೂಟರ್‍ನಲ್ಲಿ ಸಾಗಿಸುತ್ತಿದ್ದ19.340 ಗ್ರಾಂ ಎಂಡಿಎಂಎಯನ್ನು ಕುಂಬಳೆ ಠಾನೆ ಪೆÇಲೀಸರು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಮನ್ನೂರ್‍ಪಳ್ಳಿಕ್ಲಾಪ್‍ನ ಸೈಯ್ಯದ್ ಅಫ್ರೀದಿ (28) ಎಂಬಾತನನ್ನು ಬಂಧಿಸಿದ್ದಾರೆ.
ಮಾದಕದ್ರವ್ಯ ಸಾಗಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಎಸ್‍ಐ ಸನೀತ್ ಸಿ, ಎಎಸ್‍ಐ ಗಣಾದ ಸುಧೀಶ್, ಅಶೋಕ್ ರಾವ್, ಸಚೀಶ್ ಮತ್ತು ಮಹೇಶ್‍ರನ್ನೊಳಗೊಂಡ ಪೆÇಲೀಸರ ತಂಡ ಶನಿವಾರ ನಸುಕಿನ 1 ಗಂಟೆಗೆ ಶಿರಿಯಾ ಸಮೀಪದ ಮುಟ್ಟಂನ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಆಗಮಿಸಿದ ಸ್ಕೂಟರ್ ತಡೆದು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಸ್ಕೂಟರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

