ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ಚೆರ್ಕಳ ಆಸುಪಾಸು ಶುಕ್ರವಾರ ತಡರಾತ್ರಿ ಟೋರಸ್ ಲಾರಿಗೆ ಬೆಂಕಿ ತಗಲಿ ಪೂರ್ಣವಾಗಿ ನಾಶಗೊಂಡಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿಯನ್ನು ರಸ್ತೆ ಅಂಚಿಗೆ ನಿಲ್ಲಿಸಿ ಚಾಲಕ ಲಾರಿಯಿಂದ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾರ್ಟ್ ಸಕ್ರ್ಯೂಟ್‍ನಿಂದ ಲಾರಿಗೆ ಬೆಂಕಿ ತಗಲಿರಬಹುದೆಂದು ಸಂಶಯಿಸಲಾಗುತ್ತಿದೆ. ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಬೆಂಕಿ ಶಮನಗೊಳಿಸಿದರೂ ಲಾರಿ ಬಹುತೇಕ ಸುಟ್ಟುಹೋಗಿತ್ತು.

