ಕಾಸರಗೋಡು: ಜಿಲ್ಲೆಯ ತ್ರಿಕರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮನೋರಂಜನಾ ಉದ್ಯಾನವನ ಮತ್ತು ರೆಸಾರ್ಟ್‍ನ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಬಗ್ಗೆ ಜಿಲ್ಲಾ ಜಾರಿ ದಳವು 50ಸಾವಿರ ರೂ. ದಂಡ ವಿಧಿಸಿದೆ.
ರೆಸಾರ್ಟ್‍ನಿಂದ ಹೊರಬೀಳುವ ತ್ಯಾಜ್ಯವನ್ನು ಸಮೀಪದಲ್ಲಿ ಹೊಂಡ ತೆಗೆದು ಹೂಳಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಂತರ ಗ್ರಾಮ ಪಂಚಾಯಿತಿಯಿಂದ ಹೆಚ್ಚಿನ ಪರಿಶೀಲನೆ ಮತ್ತು ವರದಿಯನ್ನು ಕೇಳಲಾಯಿತು. ಜಿಲ್ಲಾ ಜಾರಿ ದಳದ ನಾಯಕ ಕೆ.ವಿ. ಮುಹಮ್ಮದ್ ಮದನಿ, ದಳದ ಸದಸ್ಯ ವಿ.ಎಂ. ಜೋಸ್ ಮತ್ತು ಆರೋಗ್ಯ ನಿರೀಕ್ಷಕಿ ಎಂ. ಸುಪ್ರಿಯಾ ಅವರ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.

