ಬದಿಯಡ್ಕ: ಇಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕುಂಬ್ಡಾಜೆ ಉಬ್ರಂಗಳದ ಪಡುಮೂಲೆ ನಿವಾಸಿ ಬಾಲಕೃಷ್ಣ ರೈ-ಶಶಿಕಲಾ ದಂಪತಿ ಪುತ್ರ ಅಕ್ಷಿತ್ ಕುಮಾರ್ (22) ಮೃತಪಟ್ಟಿದ್ದಾರೆ. ಏ. 6ರಂದು ಇಲಿ ವಿಷ ಸೇವಿಸಿ ಅಸೌಖ್ಯಪೀಡಿತರಾದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಕ್ಷಿತ್ ಕುಮಾರ್ ಕಾಸರಗೋಡಿನ ಖಾಸಗಿ ಸಂಸ್ಥೆಯೊಂದರಲ್ಲಿ ಎಸಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


