HEALTH TIPS

2028ರಿಂದ ದಿಲ್ಲಿಯಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯಿಲ್ಲ!

ನವದೆಹಲಿ: ದೆಹಲಿ ಸರ್ಕಾರ ಸಾರ್ವಜನಿಕ ಪ್ರತಿಕ್ರಿಯೆಗಾಗಿ ದಿಲ್ಲಿ ಇಲೆಕ್ಟ್ರಿಕ್ ವಾಹನ (EV) ನೀತಿ 2026-30ರ ಕರಡನ್ನು ಬಿಡುಗಡೆ ಮಾಡಿದ್ದು, ಹೊಸ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯನ್ನು 2028ರಿಂದ ಹಾಗೂ ತ್ರಿಚಕ್ರ ವಾಹನಗಳ ನೋಂದಣಿಯನ್ನು 2027ರಿಂದ ನಿಷೇಧಿಸುವ ಮೂಲಕ ಇಲೆಕ್ಟ್ರಿಕ್ ಚಾಲಿತ ವಾಹನಗಳತ್ತ ಪ್ರಮುಖ ಪರಿವರ್ತನೆಯನ್ನು ಪ್ರಸ್ತಾವಿಸಿದೆ.

ಕರಡು ನೀತಿಯನ್ನು ಸಾರಿಗೆ ಇಲಾಖೆಯ ವೆಬ್‌ ಸೈಟ್‌ ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, 30 ದಿನಗಳವರೆಗೆ ಸಾರ್ವಜನಿಕ ಅಭಿಪ್ರಾಯಗಳಿಗೆ ಮುಕ್ತವಾಗಿರುತ್ತದೆ. ಅನಂತರ ಅಂತಿಮ ನೀತಿಯನ್ನು ಅಧಿಸೂಚಿಸಲಾಗುತ್ತದೆ ಹಾಗೂ 2030ರವರೆಗೆ ಜಾರಿಯಲ್ಲಿರುತ್ತದೆ.

ಕರಡಿನ ಪ್ರಕಾರ, ದಿಲ್ಲಿ ವಾಯು ಮಾಲಿನ್ಯಕ್ಕೆ ವಾಹನಗಳು ಹೊರಸೂಸುವ ಹೊಗೆಯು ಸುಮಾರು ಶೇ. 23 ಕೊಡುಗೆ ನೀಡುವುದರಿಂದ, ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಹಾಗೂ ದಿಲ್ಲಿಯಲ್ಲಿ ಸ್ವಚ್ಛ ವಾಹನ ಸಂಚಾರವನ್ನು ಉತ್ತೇಜಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ.

ದ್ವಿಚಕ್ರ, ತ್ರಿಚಕ್ರ ಕುರಿತಂತೆ ದಿಲ್ಲಿ EV ಕರಡು ನೀತಿ ಏನು ಹೇಳುತ್ತದೆ:

2028ರಿಂದ ದಿಲ್ಲಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಹೊಸ ನೋಂದಣಿಗೆ ಅವಕಾಶ ನೀಡಲಾಗುವುದು. ಅದೇ ರೀತಿ 2027ರಿಂದ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗುವುದು. 2030ರ ವೇಳೆಗೆ ಶಾಲಾ ಬಸ್‌ ಗಳಲ್ಲಿ ಕನಿಷ್ಠ ಶೇ. 30 ಎಲೆಕ್ಟ್ರಿಕ್ ಚಾಲಿತವಾಗಿರಬೇಕು. ಸರಕಾರಿ ವಾಹನಗಳನ್ನು ಕ್ರಮೇಣ ಎಲೆಕ್ಟ್ರಿಕ್ ಚಾಲಿತ ವಾಹನಗಳಾಗಿ ಬದಲಾಯಿಸಬೇಕು ಎಂದು ಕರಡು ನೀತಿ ಪ್ರಸ್ತಾವಿಸಿದೆ.

ಕರಡು ಖರೀದಿದಾರರಿಗೆ ಬ್ಯಾಟರಿ ಸಾಮರ್ಥ್ಯಕ್ಕೆ ಸಂಬಂಧಿಸಿದ ಖರೀದಿ ಪ್ರೋತ್ಸಾಹಕಗಳನ್ನು ಪ್ರಸ್ತಾವಿಸಿದೆ. 2.25 ಲಕ್ಷ ರೂ.ವರೆಗಿನ ಬೆಲೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರೋತ್ಸಾಹ ಧನ ಮೊದಲ ವರ್ಷದಲ್ಲಿ ಪ್ರತಿ ಕಿ.ವ್ಯಾ.ಗೆ 10,000 ರೂ.ನಿಂದ ಪ್ರಾರಂಭವಾಗುತ್ತದೆ (ಗರಿಷ್ಠ 30 ಸಾವಿರ ರೂ.). ಎರಡನೇ ವರ್ಷದಲ್ಲಿ ಇದು ಪ್ರತಿ ಕಿ.ವ್ಯಾ.ಗೆ 6,600 ರೂ. (ಗರಿಷ್ಠ 20 ಸಾವಿರ ರೂ.)ಗೆ ಇಳಿಯುತ್ತದೆ ಹಾಗೂ ಮೂರನೇ ವರ್ಷದಲ್ಲಿ ಪ್ರತಿ ಕಿ.ವ್ಯಾ.ಗೆ 3,300 ರೂ. (ಗರಿಷ್ಠ 10,000 ರೂ.)ಗೆ ಕಡಿಮೆಯಾಗುತ್ತದೆ.

ಇಲೆಕ್ಟ್ರಿಕ್ ತ್ರಿಚಕ್ರ ವಾಹನಗಳು (ಇ-ರಿಕ್ಷಾ) ಮೊದಲ ವರ್ಷ 50,000 ರೂ., ಎರಡನೇ ವರ್ಷ 40,000 ರೂ. ಹಾಗೂ ಮೂರನೇ ವರ್ಷ 30,000 ರೂ.ವನ್ನು ಪಡೆಯುತ್ತವೆ. ಇಲೆಕ್ಟ್ರಿಕ್ ಸರಕು ಸಾಗಾಟ ವಾಹನಗಳು (ಎನ್‌ಐ ವರ್ಗ) ಮೊದಲ ವರ್ಷ 1 ಲಕ್ಷ ರೂ., ಎರಡನೇ ವರ್ಷ 75,000 ರೂ. ಹಾಗೂ ಮೂರನೇ ವರ್ಷ 50 ಸಾವಿರ ರೂ. ಪಡೆಯಲು ಅರ್ಹವಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries