HEALTH TIPS

ಯುಎಇಗೆ 2 ಬಿಲಿಯನ್ ಡಾಲರ್ ಸಾಲ ವಾಪಸ್: ಪಾಕ್ ಕೇಂದ್ರ ಬ್ಯಾಂಕ್

ಕರಾಚಿ: ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ನೀಡಬೇಕಿದ್ದ 2 ಬಿಲಿಯನ್ ಡಾಲರ್‌ ಸಾಲವನ್ನು ಹಿಂದಿರುಗಿಸಿರುವುದಾಗಿ ಪಾಕಿಸ್ತಾನದ ಕೇಂದ್ರ ಬ್ಯಾಂಕ್‌ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ (ಎಸ್‌ಬಿಪಿ) ಶನಿವಾರ ತಿಳಿಸಿದೆ.

ಆರ್ಥಿಕ ನೆರವಿನ ಭಾಗವಾಗಿ ಸೌದಿ ಅರೇಬಿಯಾವು 3 ಬಿಲಿಯನ್ ಡಾಲರ್‌ (ಅಂದಾಜು 83 ಸಾವಿರ ಕೋಟಿ ಪಾಕಿಸ್ತಾನ ರೂಪಾಯಿ) ಅನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದಲ್ಲಿ (ಎಸ್‌ಬಿಪಿ) ಜಮೆ ಇರಿಸಿದ ಎರಡು ದಿನಗಳ ನಂತರ, ಎಸ್‌ಬಿಪಿ ಈ ಘೋಷಣೆ ಮಾಡಿದೆ.

'ಪಾಕಿಸ್ತಾನ ಸರ್ಕಾರವು ಯುಎಇಗೆ ನೀಡಬೇಕಿದ್ದ 2 ಬಿಲಿಯನ್ ಡಾಲರ್‌ (ಅಂದಾಜು 55 ಸಾವಿರ ಕೋಟಿ ಪಾಕಿಸ್ತಾನ ರೂಪಾಯಿ) ಸಾಲವನ್ನು ಹಿಂದಿರುಗಿಸಿರುವುದನ್ನು ಕೇಂದ್ರ ಬ್ಯಾಂಕ್‌ ಖಚಿತಪಡಿಸಿದೆ' ಎಂದು ಎಸ್‌ಬಿಪಿ ವಕ್ತಾರರು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಯುಎಇ ನೆರವಾಗಿತ್ತು. ಆದರೆ, ಇದೀಗ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಾಲ ಮರುಪಾವತಿಸುವಂತೆ ಯುಎಇ ಒತ್ತಾಯಿಸಿತ್ತು ಎಂದು ಮಾಧ್ಯಮಗಳಲ್ಲಿ ಕಳೆದ ತಿಂಗಳು ವರದಿಯಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries