HEALTH TIPS

ಹಾರ್ಮುಝ್ ನಲ್ಲಿ ಮೈನ್ಸ್ ತೆರವಿಗೆ ಅಮೆರಿಕ ಸೇನೆಯಿಂದ ರೋಬೋಟ್ ಗಳ ನಿಯೋಜನೆ: ವರದಿ

ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಹುದುಗಿಸಿರುವ ಸ್ಫೋಟಕ (ಮೈನ್ಸ್)ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನೆರವಾಗುವುದಕ್ಕಾಗಿ ಅಮೆರಿಕ ಸೇನೆಯು ಸಾಗರ ಡ್ರೋನ್ ಹಾಗೂ ಇತರೆ ರೋಬೋಟಿಕ್ ವ್ಯವಸ್ಥೆಗಳನ್ನು ನಿಯೋಜಿಸಿದೆ.

ಜಾಗತಿಕವಾಗಿ ಐದನೇ ಒಂದು ಭಾಗದಷ್ಟು ತೈಲ ಹಾಗೂ LPG ಪೂರೈಕೆಯಾಗುವ ಹಾರ್ಮುಝ್ ಜಲಸಂಧಿಯಲ್ಲಿ ಹುದುಗಿಸಲಾದ ಮೈನ್ಸ್ ಗಳನ್ನು ಪತ್ತೆಹಚ್ಚಲು ಅಮೆರಿಕದ ನೌಕಾಪಡೆಯು ಮಾನವ ಹಾಗೂ ಮಾನವರಹಿತ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿದೆ ಎಂದು 'ವಾಲ್ ಸ್ಟ್ರೀಟ್ ಜರ್ನಲ್' ವರದಿ ತಿಳಿಸಿದೆ.

ಮಾನವರಹಿತ ಜಲಾಂತರ್ಗಾಮಿ ವಾಹನಗಳನ್ನು ಬಳಸಿಕೊಂಡು ಸಮುದ್ರ ತಳವನ್ನು ಪರಿಶೋಧಿಸಲು ಸಾಧ್ಯವಿದೆ ಎಂದು ಸೇನಾ ವಿಶ್ಲೇಷಕರು ತಿಳಿಸಿದ್ದಾರೆ. ಯಾವುದೇ ಮೈನ್ಸ್ ಗಳು ಪತ್ತೆಯಾದಲ್ಲಿ, ಅವುಗಳನ್ನು ನಾಶಪಡಿಸಲು ತಕ್ಷಣ ಸಾಗರ ರೋಬೋಟ್ ಗಳನ್ನು ಕಳುಹಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಇಂತಹ ವ್ಯವಸ್ಥೆಗಳನ್ನು ಬಳಸಿಕೊಂಡು ಹಡಗುಗಳು ಸಂಚರಿಸುವ ಕಾಲುವೆಗಳ ಸರ್ವೇಕ್ಷಣೆಯನ್ನು ನಡೆಸಬಹುದಾಗಿದೆ ಎಂದು ಅಮೆರಿಕದ ನೌಕಾಪಡೆಯ ಮಾಜಿ ವೈಸ್ ಅಡ್ಮಿರಲ್ ಕೆವಿನ್ ಡೊನೆಗಾನ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries