HEALTH TIPS

ಭಾರತದ ಬ್ಯಾಂಕುಗಳಲ್ಲಿ ಬಿದ್ದಿದೆ ವಾರಸುದಾರರಿಲ್ಲದ 2 ಲಕ್ಷ ಕೋಟಿ ರೂ.!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯಲ್ಲಿ ಸುಮಾರು 97,545 ಕೋಟಿ ರೂ.ಗಳು ಸಂಗ್ರಹವಾಗಿದ್ದು, ವಾರ್ಷಿಕವಾಗಿ ಶೇ. 24ರ ದರದಲ್ಲಿ ಬೆಳೆಯುತ್ತಿದೆ.
ಭಾರತದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದೆ ಖಾಲಿ ಬಿದ್ದಿರುವ ಠೇವಣಿಗಳು, ಷೇರುಗಳು, ವಿಮೆಗಳು ಮತ್ತು ನಿವೃತ್ತಿ ನಿಧಿಗಳು ಇತ್ಯಾದಿಗಳ ಮೊತ್ತ 2.2 ಲಕ್ಷ ಕೋಟಿ ರೂ. ಎಂದು ಹಣಕಾಸು ನಿಯತಕಾಲಿಕವೊಂದರ ಅಧ್ಯಯನದಲ್ಲಿ ತಿಳಿದು ಬಂದಿದೆ.

ಹೆಚ್ಚು ಕಳವಳಕಾರಿ ಸಂಗತಿಯೆಂದರೆ ಕಳೆದ ಐದು ವರ್ಷಗಳಲ್ಲಿ ಅಂಕಿ-ಅಂಶವು ತೀವ್ರವಾಗಿ ಬೆಳೆದಿದ್ದು, ಉತ್ತರಾಧಿಕಾರ ಯೋಜನೆ, ದಾಖಲೀಕರಣ ಮತ್ತು ಆರ್ಥಿಕ ಅರಿವಿನಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಹಣವು ಕಣ್ಮರೆಯಾಗಿಲ್ಲ. ಬದಲಾಗಿ, ಕಾಲಾನುಸಾರ ಮಾಲೀಕರು ಮತ್ತು ಅವರ ಆಸ್ತಿಯ ನಡುವಿನ ಸಂಪರ್ಕ ಕಡಿದು ಹೋಗಿ ಅಂತಿಮವಾಗಿ ಚಾಲನೆಯಿಲ್ಲದ ಆಸ್ತಿಯಾಗಿಬಿಡುತ್ತವೆ.

ಅತಿದೊಡ್ಡ ಪಾಲು ಬ್ಯಾಂಕ್ ಠೇವಣಿಗಳಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯಲ್ಲಿ ಸುಮಾರು 97,545 ಕೋಟಿ ರೂ.ಗಳು ಸಂಗ್ರಹವಾಗಿದ್ದು, ವಾರ್ಷಿಕವಾಗಿ ಶೇ. 24ರ ದರದಲ್ಲಿ ಬೆಳೆಯುತ್ತಿದೆ. ಡಾರ್ಮಂಟ್ (ಗ್ರಾಹಕರ ವ್ಯವಹಾರ ನಿಂತು ಹೋಗಿರುವ) ಖಾತೆಗಳನ್ನು ಸ್ಥಿರವಾಗಿ ಈ ನಿಧಿಗೆ ವರ್ಗಾಯಿಸಲಾಗುತ್ತಿದೆ. ಅಲ್ಲಿ ಹಣ ಉಳಿದರೂ ಪತ್ತೆ ಹಚ್ಚುವುದು ಕಷ್ಟವಾಗಿಬಿಡುತ್ತದೆ.

ಈ ಬಹುತೇಕ ಹಣವು ಹಿಂದಿನ ತಲೆಮಾರಿನವರಿಂದ ಬಂದಿದೆ. ಆಗ ಖಾತೆಗಳನ್ನು ಭೌತಿಕ ದಾಖಲೆಗಳೊಂದಿಗೆ ತೆರೆಯಲಾಗುತ್ತಿತ್ತು ಮತ್ತು ಅವುಗಳನ್ನು ಕ್ರೂಢೀಕರಿಸಿ ಇಡಲಾಗುತ್ತಿರಲಿಲ್ಲ. ಬ್ಯಾಂಕ್ ಖಾತೆ 10 ವರ್ಷ ನಿಷ್ಕ್ರಿಯವಾಗಿದ್ದರೆ, ಹಣವನ್ನು ರಿಸರ್ವ್ ಬ್ಯಾಂಕ್ ನಿರ್ವಹಿಸುವ ನಿಧಿಗೆ ವರ್ಗಾಯಿಸಲಾಗುತ್ತದೆ. ಈ ಹಣ ಕಣ್ಮರೆಯಾಗುವುದಿಲ್ಲ. ಅದನ್ನು ಇನ್ನೂ ಯಾವುದೇ ಸಮಯದಲ್ಲಿ ಖಾತೆದಾರರು ಅಥವಾ ಅವರ ಕುಟುಂಬವು ಬ್ಯಾಂಕ್ ಮೂಲಕ ಕ್ಲೇಮ್ ಮಾಡಬಹುದು. ನಂತರ RBI ಕ್ಲೇಮ್ ಅನ್ನು ಇತ್ಯರ್ಥಪಡಿಸುತ್ತದೆ.

ಹೀಗೆ ವಾರಸುದಾರರು ಆಗಮಿಸುವವರೆಗೂ ಹಣವು ಕಡಿಮೆ ಸ್ಥಿರ ಲಾಭವನ್ನು (low fixed return) ಗಳಿಸುತ್ತದೆ. ಪ್ರಸ್ತುತ ಸುಮಾರು ಶೇ 3 ಮತ್ತು ಠೇವಣಿದಾರರ ಜಾಗೃತಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಮಾಲೀಕತ್ವ ಠೇವಣಿದಾರರ ಬಳಿಯೇ ಉಳಿಯುತ್ತದೆ. ಆದರೆ ಹಣವನ್ನು ನೇರವಾಗಿ ಬ್ಯಾಂಕ್ನಲ್ಲಿ ಇರುವುದಿಲ್ಲ.

ಷೇರು ಮಾರುಕಟ್ಟೆಗಳಲ್ಲೂ ಇದೇ ರೀತಿಯ ಮಾದರಿ ಕಂಡುಬರುತ್ತದೆ. 89,004 ಕೋಟಿ ರೂ.ಗಳಷ್ಟು ಮೌಲ್ಯದ ಷೇರುಗಳು ಅಂದರೆ, 1,671 ಕಂಪನಿಗಳ 166 ಕೋಟಿ ಷೇರುಗಳನ್ನು ಇನ್ವೆಸ್ಟರ್ ಎಜುಕೇಶನ್ ಮತ್ತು ಪ್ರೊಟೆಕ್ಷನ್ ಫಂಡ್ ಅಥಾರಿಟಿಗೆ (ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ) ವರ್ಗಾಯಿಸಲಾಗಿದೆ.

ಏಳು ವರ್ಷಗಳ ಕಾಲ ಡಿವಿಡೆಂಡ್ ಗಳನ್ನು ಕ್ಲೇಮ್ ಮಾಡದೆ ಇದ್ದರೆ, ಎರಡೂ ಡಿವಿಡೆಂಟ್ ಮತ್ತು ಅದಕ್ಕೆ ಸಂಬಂಧಿಸಿದ ಚೇರುಗಳನ್ನು ಪ್ರಾಧಿಕಾರಕ್ಕೆ ವರ್ಗಾಯಿಸಲಾಗುತ್ತದೆ. ಇವುಗಳಲ್ಲಿ ಕೆಲವು ಷೇರುಗಳು ಮತ್ತು ಹೋಲ್ಡಿಂಗ್ಗಳು ಇಂದಿಗೂ ಲಾಭ ತಂದುಕೊಡುತ್ತಿವೆ. ಆದರೆ ಅದರ ಮಾಲೀಕರನ್ನು ಪತ್ತೆ ಹಚ್ಚಲಾಗಿಲ್ಲ.

ಅದೇ ರೀತಿ 20,063 ಕೋಟಿ ರೂ.ಗಳಷ್ಟು ವಿಮೆಗಳು ಮೆಚ್ಯೂರಿಟಿಗೊಂಡರೂ ಅದನ್ನು ಕ್ಲೇಮ್ ಮಾಡಲಾಗಿಲ್ಲ. ಮರಣದ ಲಾಭಗಳು ಮತ್ತು ಶರಾಣತಗಿ ಪಾಲಿಸಿಗಳಲ್ಲಿ ಕ್ಲೇಮ್ಗಳಿಲ್ಲದ ಹಣ RBIಗೆ ವರ್ಗಾವಣೆಗೊಂಡಿದೆ. ಕ್ಲೇಮ್ ಮಾಡದೆ ಇದ್ದ ಹಣ 10 ವರ್ಷಗಳ ಕಾಲ ವಿಮಾದಾರರ ಹೆಸರಿನಲ್ಲಿರುತ್ತದೆ. ನಂತರ ಸರ್ಕಾರಿ ನಿಧಿಗೆ ವರ್ಗಾವಣೆಯಾಗುತ್ತದೆ. ಅಲ್ಲಿ ರಿಟರ್ನಸ್ ವಿಮಾದಾರರಿಗೆ ಹರಿಯುವುದಿಲ್ಲ.

ನಿವೃತ್ತಿ ಉಳಿತಾಯಗಳಲ್ಲೂ ಇಷ್ಟೇ ಪ್ರಮಾಣದ ಹಣ ವಾರಸುದಾರರಿಲ್ಲದೆ ಬಿದ್ದಿದೆ. ಸುಮಾರು 31.87 ಲಕ್ಷಗಳಷ್ಟು ಚಾಲ್ತಿಯಲ್ಲಿಲ್ಲದ ಇಪಿಎಫ್ ಖಾತೆಗಳಲ್ಲಿ 10,915 ಕೋಟಿ ರೂ.ಗಳು ಉಳಿದಿವೆ. ಇವುಗಳಲ್ಲಿ ಶೇ 38ರಷ್ಟು ಖಾತೆಗಳು 5ರಿಂದ 10 ವರ್ಷಗಳವರೆಗೆ ಚಾಲ್ತಿಯಲ್ಲಿಲ್ಲದೆ ಇದ್ದರೆ, ಶೇ 21ರಷ್ಟು ಖಾತೆಗಳು 20 ವರ್ಷಗಳಿಂದ ಚಾಲ್ತಿಯಲ್ಲಿಲ್ಲ.

ಈ ನಿಧಿಗಳು ಏನಾಗುತ್ತವೆ?

ಅನೇಕರು ತಮ್ಮ ಹಣವನ್ನು ಬಹು ಉತ್ಪನ್ನಗಳಲ್ಲಿ ಹರಡುತ್ತಿದ್ದಂತೆ, ಜಾಡನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಒಮ್ಮೆ ಹಣವು ಕೈಗೆಟುಕದ ನಂತರ ಏನಾಗುತ್ತದೆ ಎಂಬುದು ಗೋಚರಿಸುವುದಿಲ್ಲ. ಠೇವಣಿದಾರರು, ಹೂಡಿಕೆದಾರರು ಮತ್ತು ಅವರ ಕುಟುಂಬಕ್ಕೆ ಹಣವನ್ನು ಪಡೆಯುವ ಕಾನೂನುಬದ್ಧ ಹಕ್ಕಿದೆ. ಈ ಹಣದ ದಾರಿಯಲ್ಲಿ ಸಿಗುವ ಪ್ರಯೋಜನಗಳು ಸಿಗುವುದಿಲ್ಲ. ಸರಳವಾಗಿ ಹೇಳುವುದಾದರೆ ಸ್ವತ್ತುಗಳ ಮಾಲೀಕತ್ವ ಉಳಿಯುತ್ತದೆ ಕಾಲಾನಂತರದಲ್ಲಿ ಮೌಲ್ಯ ಮತ್ತು ಪ್ರವೇಶ ದೂರವಾಗುತ್ತದೆ. RBIಗೆ ವರ್ಗಾವಣೆಯಾದ ನಿಧಿಗೆ ಶೇ 3ರಷ್ಟು ಸರಳ ಬಡ್ಡಿ ಸಿಗುತ್ತದೆ. ಇದು ಹಣದುಬ್ಬರದಕ್ಕಿಂತ ಕಡಿಮೆ ಬಡ್ಡಿಯಾಗಿದೆ.

ನಿಮ್ಮದೇ ಹಣ ಪತ್ತೆ ಮಾಡುವುದು ಸಾಧ್ಯವಿಲ್ಲವೇಕೆ?

ವ್ಯವಸ್ಥೆಯ ರಚನೆಯೇ ಹಾಗಿರುವ ಕಾರಣ ವಾರಸುದಾರರ ಪತ್ತೆ ಕಷ್ಟವಾಗುತ್ತದೆ. ವಿಭಿನ್ನ ನಿಯಂತ್ರಕರಿಂದ ನಿಯಂತ್ರಿಸಲಾಗುವ ವಿಭಿನ್ನ ಆಸ್ತಿ ವರ್ಗಗಳ ನಡುವೆ ವ್ಯಕ್ತಿ ಏನು ಹೊಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಮಾರ್ಗವೇ ಇಲ್ಲ. ವಿಳಾಸ ಬದಲಾವಣೆಗಳು ಅಥವಾ ಖಾತೆದಾರರ ಮರಣದ ಸಂದರ್ಭದಲ್ಲಿ ಹೆಚ್ಚಾಗಿ ವಾರಸುದಾರರಿಗೆ ವಿವರ ತಿಳಿಯದೆ ಇರುವಾಗ ಕ್ಲೇಮ್ ಮಾಡುವುದು ಸಾಧ್ಯವಾಗುವುದಿಲ್ಲ. ಹಳೆಯ ಕೆವೈಸಿ ಡೇಟಾವು ಹಣಕಾಸು ಸಂಸ್ಥೆಗಳ ಸರಿಯಾದ ಮಾಲೀಕರು ಅಥವಾ ಉತ್ತರಾಧಿಕಾರಿಗಳನ್ನು ತಲುಪುವುದನ್ನು ತಡೆಯುತ್ತದೆ.

ಆದರೆ ಇದೀಗ ಡಿಜಿಟಲೀಕರಣದ ನಂತರ ಖಾತೆ ತೆರೆಯವುದು ಮತ್ತು ಹೂಡಿಕೆ ಸುಲಭವಾಗಿದೆ. ಜೀವಿತಾವಧಿಯ ಹಣ ಟ್ರ್ಯಾಕ್ ಮಾಡುವುದು ಸರಳವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries