HEALTH TIPS

ಹಲವಾರು ಕುಟುಂಬಗಳು ಸಂಕಷ್ಟದಲ್ಲಿ: ಬಾವಿ, ಹೊಳೆಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟ; ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ 4 ದಿನಕ್ಕೊಮ್ಮೆ ನಳ್ಳಿನೀರು ವಿತರಣೆ

ಉಪ್ಪಳ: ಹವಾಮಾನ ವೈಪರೀತ್ಯದ ಪರಿಣಾಮ ಬಿಸಿ ಏರುತ್ತಿರುವಂತೆಯೇ ಕುಡಿಯುವ ನೀರಿಗೆ ಕ್ಷಾಮ ತಲೆದೋರಲು ಆರಂಭವಾಗಿದೆ. ಪ್ರತೀ ವರ್ಷ ಬೇಸಿಗೆಕಾಲದಲ್ಲಿ ಮಂಗಲ್ಪಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕ್ಷಾಮ ವ್ಯಾಪಕವಾಗುತ್ತಿದ್ದು ಈ ಬಾರಿ ಈಗಲೇ ನೀರಿನ ಕ್ಷಾಮ ಕಂಡುಬರುತ್ತಿದೆ. ಬಾವಿ ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಉಪ್ಪಳ ಹೊಳೆಯ ಕೊಡಂಗೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ನೀರು ಕಡಿಮೆಯಾಗಿರುವುದು ಪೈಪ್ ಮೂಲಕ ವಿತರಣೆಗೆ ತೊಡಕಾಗಿದೆ. ಇದುವರೆಗೆ ಎರಡು ದಿನಕ್ಕೊಮ್ಮೆ ವಿತರಿಸಲಾಗುತ್ತಿದ್ದ ಕುಡಿಯುವ ನೀರು ಈಗ ನಾಲ್ಕು ದಿನಕ್ಕೊಮ್ಮೆ ವಿತರಣೆಗೊಳ್ಳಲಾರಂಭಿಸಿದೆ. ಇದರಿಂದಾಗಿ ನಳ್ಳಿ ನೀರನ್ನೇ ಆಶ್ರಯಿಸುವ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

ಕೊಡಂಗೆ ಬಾವಿಯಿಂದ ಬೇಕೂರು ಹಿರಣ್ಯಪದವಿನಲ್ಲಿರುವ ಬೃಹತ್ ಟ್ಯಾಂಕ್‍ನಲ್ಲಿ ನೀರು ತುಂಬಿಸಿ ಪಂಚಾಯತಿ ವ್ಯಾಪ್ತಿಯ ಸುಮಾರು 5000 ಕುಟುಂಬಗಳಿಗೆ ನೀರು ವಿತರಿಸಲಾಗುತ್ತಿದೆ. ಆದರೆ ಈಗ ನಾಲ್ಕು ದಿನಗಳಿಗೊಮ್ಮೆ ವಿತರಿಸುತ್ತಿರುವ ಕಾರಣ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಇಲ್ಲಿ ಇನ್ನೊಂದು ಟ್ಯಾಂಕ್ ನಿರ್ಮಿಸಿ ನೀರು ವಿತರಣೆಯನ್ನು ಸಮರ್ಪಕಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries