ಮುಳ್ಳೇರಿಯ: ಬೆಳ್ಳೂರು ಪಂಚಾಯಿತಿ ನೆಟ್ಟಣಿಗೆ ಕುಳದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏಪ್ರಿಲ್ 22 ಮತ್ತು 23ರಂದು ನಡೆಯಲಿದೆ. 22ರಂದು ಸಂಜೆ 7 ಗಂಟೆಗೆ ಕುಳ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, 8.30ರಿಂದ ಕುಳದಪಾರೆ ಅಂಗನವಾಡಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, 9ರಿಂದ ನೃತ್ಯ ವೈವಿಧ್ಯ, 11ರಿಂದ ಶ್ರೀ ವಿಷ್ಣು ಮೂರ್ತಿ ದೈವದ ಕುಳಿಚ್ಚಾಟ ಬಳಿಕ ಯಕ್ಷಗಾನ ಬಯಲಾಟ, 23ರಂದು ಬೆಳಗ್ಗೆ 5ರಿಂದ ಶ್ರೀ ವಿಷ್ಣು ಮೂರ್ತಿ ದೈವದ ಅಗ್ನಿಸ್ನಾನ ನಡೆಯಲಿದೆ.

