ಮಂಜೇಶ್ವರ: ಯುವತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದನ್ವಯ ಪತಿ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೆರ್ಲ ಸನಿಹದ ಕುರೆಡ್ಕ ನಿವಾಸಿ ಅಬ್ದುಲ್ಲ ಕುಂಞಯವರ ಪುತ್ರಿ ಆಸಿಯತ್ ಇಸಾನ್(23) ನೀಡಿದ ದೂರಿನ ಮೇರೆಗೆ ಈಕೆಯ ಪತಿ ಬಾಯಾರುಪದವು ನಿವಾಸಿ ಅಸ್ಕರ್ ಯಾಸಿನ್, ಈತನ ತಂದೆ ಮೊಯ್ದೀನ್, ತಾಯಿ ಬೀಫಾತಿಮ, ಸಹೋದರ ಅನಸ್ ಎಂಬಿವರ ವಿರುದ್ಧ ಈ ಕೇಸು ದಾಖಲಾಗಿದೆ.
ಅಸ್ಕರ್ ಯಾಸಿನ್ ಹಾಗೂ ಆಸಿಯತ್ ಇಸಾನ್‍ರ ಮದುವೆ 2024 ಸೆಪ್ಟಂಬರ್ 23ರಂದು ನಡೆದಿದ್ದು, ನಂತರದ ದಿನಗಳಲ್ಲಿ ತವರಿಂದ ಹೆಚ್ಚಿನ ಚಿನ್ನಾಭರಣ ತಂದುಕೊಡುವಂತೆ ಒತ್ತಾಯಿಸಿ ಪತಿ ಹಾಗೂ ಮನೆಯವರು ನಿರಂತರ ಕಿರುಕುಳ ನೀಡುತ್ತಿರುವುದಾಗಿ ಆಸಿಯತ್ ಇಸಾನ್ ನೀಡಿದ ದುರಿನಲ್ಲಿ ತಿಳಿಸಿದ್ದಾರೆ.

