ಕಾಸರಗೋಡು: ಅಸೌಖ್ಯ ಬಾಧಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಿದ ತಂಡವೊಂದು ಕ್ಯಾಶ್ಯುಲಿಟಿಯಲ್ಲಿ ದಾಂಧಲೆ ನಡೆಸಿದ ಬಳಿಕ ಆಸ್ಪತ್ರೆಯ ಸೆಕ್ಯುರಿಟಿ ನೌಕರನ ಮೇಲೆ ಹಲ್ಲೆಗೈದಿದ್ದು, ಈ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕುಂಬಳೆ ಶಾಂತಿಪಳ್ಳ ನಿವಾಸಿ ಚಂದ್ರು ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯ ಸೆಕ್ಯುರಿಟಿ ನೌಕರನಾದ ಮಂಡೆಕಾಪು ನಿವಾಸಿ ಗೌತಮ್ ಟಿ (28) ಎಂಬವರು ತಂಡದ ಹಲ್ಲೆಯಿಂದ ಗಾಯಗೊಂಡಿದ್ದು, ಇವರನ್ನು ಇದೇ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದೇ ವೇಳೆ ಘಟನೆಗೆ ಸಂಬಂಧಿಸಿ ಕುಂಬಳೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಅಸೌಖ್ಯ ಬಾಧಿಸಿದ ವ್ಯಕ್ತಿಯನ್ನು ಚಂದ್ರು ಒಳಗೊಂಡ ತಂಡ ಆಸ್ಪತ್ರೆಗೆ ತಲುಪಿಸಿತ್ತು. ಬಳಿಕ ಇದೇ ತಂಡ ಕ್ಯಾಶ್ಯುಲಿಟಿಯಲ್ಲಿ ವಾಗ್ವಾದ ನಡೆಸಿ ಗದ್ದಲ ಉಂಟುಮಾಡಿದ್ದು, ಈ ವೇಳೆ ಅಲ್ಲಿಗೆ ತಲುಪಿದ ಸೆಕ್ಯೂರಿಟಿ ನೌಕರ ಗೌತಮ್ ಅವರು ಆಸ್ಪತ್ರೆಯಲ್ಲಿ ಗದ್ದಲ ಮಾಡದಂತೆ ವಿನಂತಿಸಿಕೊಂಡಿದ್ದರು. ಇದರಿಂದ ಕುಪಿತಗೊಂಡ ತಂಡ ಗೌತಮ್ ಅವರ ಮೇಲೆ ಹಲ್ಲೆ ನಡೆಸಿತ್ತು.

