ಕಾಸರಗೋಡು: ಹೊಸದಾಗಿ ಆರಂಭಿಸುವ ಆಸ್ಪತ್ರೆಯಲ್ಲಿ ಹಣ ಹೂಡಿಕೆ ಇರಿಸಿದರೆ ಶೇರ್ ಹಾಗೂ ಲಾಭಾಂಶ ನೀಡುವ ಭರವಸೆಯೊಂದಿಗೆ ವೈದ್ಯರ ಕೈಯಿಂದ 17 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ಪಿಲಿಕುಂಜೆ ನಿವಾಸಿ ಡಾ. ಅಪರ್ಣ (39) ನೀಡಿದ ದೂರಿನನ್ವಯ ಪಿಲಿಕುಂಜೆ ಕ್ಲಾಟ್ ಹೌಸ್ ನ ಡಾ. ಮುಹಮ್ಮದ್ ಸಹೀರ್, ಡಾ. ಪಿ. ಅಲಿ (72), ಡಾ. ತನ್ಸೀಹ್ ನರ್ಗೀಸ್ (36), ಡಾ. ಆಯಿಷತ್ ಶಂಸೀರ (39) ಎಂಬಿವರ ವಿರುದ್ಧ ಈ ಕೇಸು ದಾಖಲಾಗಿದೆ. ಕೊಚ್ಚಿಯಲ್ಲಿ ಹೊಸದಾಗಿ ಆರಂಭಿಸುವ ಆಸ್ಪತ್ರೆಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಶೇರ್ ಜತೆಗೆ ಲಾಭಾಂಶ ನೀಡುವುದಾಗಿ ಭರವಸೆಯೊಡ್ಡಿ 17 ಲಕ್ಷ ರೂ.ನಗದನ್ನು ಡಾ. ಮುಹಮ್ಮದ್ ಸಹೀರ್ ಎಂಬವರ ಬ್ಯಾಂಕ್ ಖಾತೆಗೆ ಹಣ ಪಾವತಿಸಿಕೊಂಡಿರುವುದಾಗಿ ಡಾ. ಅಪರ್ಣಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.



