ನವದೆಹಲಿ: ಅಖಿಲ ಭಾರತ ಪ್ರವಾಸಿ ಪರವಾನಗಿ (ಎಐಟಿಪಿ) ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯ ತಿದ್ದುಪಡಿ ಮಾಡಿದ್ದು, ಹೊರ ರಾಜ್ಯಗಳ ಪ್ರಯಾಣದ ಗರಿಷ್ಠ ಅವಧಿ 60 ದಿನಗಳಿಗೆ ಸೀಮಿತಗೊಳಿಸಿದೆ.
ಒಂದು ರಾಜ್ಯದಲ್ಲಿ ನೋಂದಣಿ ಯಾದ ವಾಹನಗಳು ಮೊದಲು ಹೊರ ರಾಜ್ಯಗಳಲ್ಲಿ 90 ದಿನ ಇರಬಹು ದಿತ್ತು.
ಅದರಲ್ಲಿ 30 ದಿನ ಕಡಿತಗೊಳಿಸಲಾಗಿದೆ. ಪ್ರಯಾಣವು ಮೂಲ ರಾಜ್ಯದಲ್ಲೇ ಆರಂಭವಾಗಿ ಕೊನೆಗೊಳ್ಳಬೇಕು. ಜಿಪಿಎಸ್ ಟ್ರ್ಯಾಕರ್ ಮೂಲಕ ಮೇಲ್ವಿಚಾರಣೆ ಮಾಡಲಾಗು ವುದು ಎಂದು ತಿದ್ದುಪಡಿ ಹೇಳಿದೆ.
ಪ್ರತಿ ಎಐಟಿಪಿ ಹೊಂದಿರುವ ವಾಹನದಲ್ಲಿ ಟ್ರ್ಯಾಕಿಂಗ್ ಸಾಧನ ಕಡ್ಡಾಯವಾಗಿ ಇರಬೇಕು. ಸಂಚಾರವನ್ನು ಕಮಾಂಡ್ ಆಯಂಡ್ ಕಂಟ್ರೋಲ್ ಸೆಂಟರ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಪಾವತಿಸದ ಟೋಲ್ ಅನ್ನು ಬಳಕೆದಾರರ ಶುಲ್ಕ ಎಂದು ಸೇರಿಸಲಾಗುವುದು. ಟೋಲ್ ಬಾಕಿ ಇದ್ದರೆ ಪರವಾನಗಿ ನೀಡುವ ಮೊದಲು ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ತಪಾಸಣೆ ಸಮಯದಲ್ಲಿ ಪ್ರವಾಸಿ ವಾಹನ ನಿರ್ವಾಹಕರು ಅಗತ್ಯ ವಿವರ ಹೊಂದಿರಬೇಕು. ಪ್ರಯಾಣದ ಆರಂಭ ಸ್ಥಳ, ತಲುಪುವ ಸ್ಥಳ, ಮಾರ್ಗ ಹಾದು ಹೋಗುವ ರಾಜ್ಯಗಳ ವಿವರ ಇರಬೇಕು. ಎಐಟಿಪಿ ವಾಹನಗಳನ್ನು ಸ್ಟೇಜ್ ಕ್ಯಾರೇಜ್ ಆಗಿ ಬಳಸಲು ಅವಕಾಶ ಇಲ್ಲ. ಪಟ್ಟಿಯಲ್ಲಿ ಇಲ್ಲದ ಪ್ರವಾಸಿಗರನ್ನು ಹತ್ತಿಸಲು ಅಥವಾ ಇಳಿಸಲು ಅವಕಾಶವಿಲ್ಲ.
ಹಳೇ ಅಂಶಗಳು: ಪರವಾನಗಿಯನ್ನು ವಾಹನ ನೋಂದಾಯಿಸಿದ ರಾಜ್ಯದ ಸಾರಿಗೆ ಪ್ರಾಧಿಕಾರದಿಂದ ಪಡೆಯ ಬೇಕು. ತ್ರೈಮಾಸಿಕ, ವಾರ್ಷಿಕ ಮಾನ್ಯತೆ ಇರಬೇಕು. ಯಾವುದೇ ಬಾಕಿ ಚಲನ್ ಇರಬಾರದು. ಎಲ್ಲ ದಾಖಲೆಗಳು ಮಾನ್ಯ ವಾಗಬೇಕು ಮುಂತಾದ ಹಳೆಯ ನಿಯಮಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ತಿಳಿಸಿದ್ದಾರೆ.

